"ಹೃದಯದ ಮಾತು ಅರಿತು "
ಹೃದಯದ ಮಾತು ನೀ ಅರಿತು..ಬಳಿ ಬಾರೆ
ಬಂಗಾರಿ ಚಲುವಿನ ಐಸಿರಿ..
ಹೃದಯದ ಮಾತು ನೀ ಅರಿತು.. ಬಳಿ ಬಾರೆ..
ಬಂಗಾರಿ ನೀ ಬಲು ಸುಂದರಿ..
ಈ ಹೃದಯ ನೀ... ಈ ಹೃದಯ ನೀ... ll ಪಲ್ಲವಿ ll
ಮಳೆಯ ಮೋಡ ಸಾಲಾಗಿ ಸಾಲಾಗಿ ಹೋಗುತಿದೆ ನೋಡ..ಮಳೆ ಸುರಿಸಿ ಸುರಿಸಿ
ಇಳೆಯಲಿ ಹಸಿರ ಹಾಸಿ ಉಸಿರ ತುಂಬಿಸಿ
ಹೋಗುತಿದೆ ನೋಡ..ಹೋಗುತಿದೆ ನೋಡ
ಈ ಸುಂದರ ಸೌಂದರ್ಯ ಸೊಬಗು ನೋಡ ll 1 ll
ಎಲ್ಲೂ ನಾ ಕಣೆ ನಿನ್ನಂತ ಚಲುವೆ
ಮುದ್ದು ಒಲವೇ ಮುದ್ದು ಒಲವೇ
ಮಲ್ಲಿಗೆ ಹೂ, ಸಂಪಿಗೆ ಹೂ ಸೇವಂತಿಗೆ
ತೋಟಕೆ ಹೋಗುವೆ ತೋಟಕೆ ಹೋಗುವೆ
ಸುಂದರ ಹೂಗಳ ..ಮಾಲೆ ತರುವೆ..
ಹೂ ಮಾಲೆ ಮೂಡಿಸಿ ಮುತ್ತಿನ
ಮಳೆ ಸುರಿಸಿ ಮುದ್ದು ಮಾಡುವೇ
ಈ ಹೃದಯವೆ ನಾ ನೀಡುವೆ...
ಈ ಮಣ್ಣಿನ ಹೆಣ್ಣನು ನಾ ಬೇರೆವೆ...ll 2ll
✍️ವೀರೇಶ್ ವಿ ಖೈರವಾಡಗಿ
- Veereshappa v khairawadagi
30 May 2026, 07:28 am
Download App from Playstore: