ಹಾಗೆ ಸುಮ್ಮನೆ

ತಾನು ಒಳ್ಳೆಯವರಂತೆ ತೋರಲು ಮತ್ತೊಬ್ಬರ ಬೆನ್ನ ಹಿಂದೆ ಅವರ ತೇಜೋವಧೆ ಮಾಡುವುದು ಸರಿಯಲ್ಲ..
ಮುಂದೆ ಸಕ್ಕರೆಯಂತೆ ಸಿಹಿಮಾತು ಬೆನ್ನ ಹಿಂದೆ ಹರಿತವಾದ ಕತ್ತಿ ಮಸೆಯುವುದು..!!
ತಮಗೆ ಸಹಾಯ ಮಾಡಿದಾಗ ಮಾತ್ರ ಅವರು ಒಳ್ಳೆಯವರು ,ಇಲ್ಲವಾದಲ್ಲಿ ಅವರು ನಮ್ಮ ಶತ್ರುಗಳು...!!
ತಮ್ಮ ಒಳ್ಳೆಯತನವನ್ನು ಬೇರೆಯವರ ಮುಂದೆ ಪ್ರದರ್ಶಿಸುವ ಅವಶ್ಯಕತೆಯಿಲ್ಲ..
ಒಳ್ಳೆಯತನ ಯಾವತ್ತಿಗೂ ಬೂದಿ ಮುಚ್ಚಿದ ಕೆಂಡದಂತೆ ಒಂದು ದಿನ ಬೆಂಕಿಯಂತೆ ಎಲ್ಲವನ್ನೂ ಸುಟ್ಟು ಬೂದಿ ಮಾಡುತ್ತದೆ ನೆನಪಿರಲಿ...!!
ಬೇರೆಯವರನ್ನು ಮೆಚ್ಚಿಸುವ ಸಲುವಾಗಿ, ತಮ್ಮವರನ್ನು ಕೀಳಾಗಿ ಕಾಣಬೇಡಿ..!!
ನಿಮ್ಮನ್ನು ನಂಬಿ ಬಂದವರನ್ನು ಯಾವತ್ತೂ ದೂರ ಮಾಡಬೇಡಿ...
ಕ್ಷಣಿಕ ಸಂತೋಷಕ್ಕಾಗಿ ತಮ್ಮವರ ಭಾವನೆಗಳ ಜೊತೆ ಆಟವಾಡಬೇಡಿ...
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಅವರ ಭಾವನೆಗಳಿಗೆ ಗೌರವ ನೀಡುವುದನ್ನು ಕಲಿಯಿರಿ..
ನೀವೂ ಮುಂದೆ ಸಾಗಿ ಹಾಗೂ ನಿಮ್ಮ ಜೊತೆಗಾರರಿಗೂ ಮುಂದೆ ಹೋಗಲು ದಾರಿ ಮಾಡಿಕೊಡಿ...
ಸ್ವಾರ್ಥದಿಂದ ಏನನ್ನು ಪಡೆಯಲು ಸಾಧ್ಯವಿಲ್ಲ ಅದರ ಬದಲು ನಿಸ್ವಾರ್ಥಗಳಾಗಿ ಮುಂದೆ ಸಾಗಿ ,ಜಯ ಖಂಡಿತವಾಗಿ ಸಿಕ್ಕೇ ಸಿಗುತ್ತದೆ...!!

ಇದು ನಿನ್ನ ಜೀವನ So ನಿನಗಾಗಿ ನೀನು ಬದುಕಿ‌ದರೆ ಸಾಕು , ಅದನ್ನು ಬಿಟ್ಟು ನಿನ್ನ So Called Friends ತರಹ ನಟಿಸುವವರನ್ನು ಮೆಚ್ಚಿಸುವ ಅವಶ್ಯಕತೆ ಇಲ್ಲ... ಹಾಗೂ ನಿನ್ನ ಅವಶ್ಯಕತೆ ಇಲ್ಲದ ಕಡೆ ತಲೆಯನ್ನು ಬಾಗಿಸುವ ಅಗತ್ಯನೂ‌‌ ಇಲ್ಲ...!!!

- ನಮಿತ ಗಟ್ಟಿ

30 May 2026, 06:40 pm
Download App from Playstore: