"ವೃಕ್ಷ ವನ ಮಾತೆ ತಿಮ್ಮಕ್ಕ "
*ಕವನ-11: ವೃಕ್ಷ ವನ ಮಾತೆ ತಿಮ್ಮಕ್ಕ...*
*ಕವಿ - ವೀರೇಶ್ ವಿ ಖೈರವಾಡಗಿ*
ವೃಕ್ಷ ವನ ಮಾತೆ ತಿಮ್ಮಕ್ಕ...
ಬಿಸಿಲು ಬೇಗೆ ತಣಿಸಲು ಸಾಲು ಮರವ ನೆಟ್ಟಳು
ಮಹಾ ಪುಣ್ಯಾಪಡೆದಳು ಮಹಾ ಮಾತೆಯಾದಳು
ಮರದಲಿ ತಾಯಿಪ್ರೀತಿ ತೋರಿ ಬೆಳೆಸಿದಳು
ಕರುನಾಡ ಕನ್ನಡದ ಮಣ್ಣಿನ ಕೀರ್ತಿ ಹಬ್ಬಿಸಿದಳು || ಪಲ್ಲವಿ ||
ಮರವ ನೋಡಿ ಮಮತೆಯಿಂದ ಹಿಗ್ಗಿದಳು
ಮಾನವ ಕುಲಕೆ ಮಹಾನ್ಯದ ತಾಯಿ ದೇವತೆ
ಬಿಸುಲು ಏನೇ ಇರಲಿ ತಿರು ತಿರುಗಿ ತಂದು
ನಿರುಣಿಸಿದಳು ಗಿಡವ ಹೆಮ್ಮರವ ಮಾಡಿ
ಸಂತೋಷ ಸಂಭ್ರಮ ಸಂತಸ ಕಂಡಳು ||1||
ಸಾಲು ಸಾಲಾಗಿ ಮೆರವಣಿಗೆ ಸನ್ಮಾನ ಕಂಡಳು
ಮರವೇ ಮನೆ ಪ್ರಕೃತಿಯೇ ಸಿರಿ ಸಂಪತ್ತು
ಮಾನವ ಕುಲಕೋಟಿ ಮಹಾ ಮಾತೆ...
ಮರವ ಅಪ್ಪಿಕೊಂಡು ಮುದ್ದಾಡಿದಳು
ಎಲ್ಲರ ಅಕ್ಕರೆಯ ಅಕ್ಕ ಸಕ್ಕರೆ ತಿಮ್ಮಕ್ಕ ತಿಮ್ಮಕ್ಕ..|| 2||
✍️ವೀರೇಶ್ ವಿ ಖೈರವಾಡಗಿ
- Veereshappa v khairawadagi
31 May 2026, 03:47 pm
Download App from Playstore: