llಬಾನಲಿ ಕಪ್ಪು ಮೋಡ ll


ಬಾನಿನಲಿ ಕಪ್ಪು ಮೋಡ ಮಳೆ ತಂತುರು ನೋಡ
ಬುವಿಯೋಡಲ ತಂಪು ಎರಚಿ ಹೋಯ್ತು ನೋಡ
ಗರೀಬಿಚ್ಚಿ ಆಕಾಶ್ಕಡೆಗೊಮ್ಮೆ ಹಕ್ಕಿಗಳ ನೋಡ ll ಪಲ್ಲವಿ ll
ತಂಪಾದ ಗಾಳಿ ಬಿಸಿ ಬಿಸಿ
ಹಸಿರ ಸೌಂದರ್ಯ ರಾಶಿ
ಹಕ್ಕಿಗಳ ಚಿಲಿಪಿಲಿ.. ವನ್ಯ ಮೃಗ ಹರ್ಷೋಗ್ದಾರ
ಈ ಅಂದದ ಕಾಡು ನೋಡುತ..
ತುಂಬಿದೆ ಪ್ರೀತಿ ನನ್ನಲಿ ನನ್ನ ಹೃದಯದಲಿ.
ll 1ll
ಕಾಡು ಅಳೆಯುತ ಹಕ್ಕಿ ಸಂoಭ್ರಮ ನೋಡಿದೇ
ನವಿಲು ನರ್ತನೇ ಗಿಳಿಗಳ ಪಿಸುಮಾತು ಕೇಳಿದೆ
ಮನ ಉಲ್ಲಾಸ ಕುಪ್ಪಲಿಸಿ ಕುಣಿದಿದೆ ಕೂಗಿದೆ
ನದಿಯ ನಾದ ಕಲರವ ಕೇಳಿದೆ ಹಾಡಿದೆ...
ಖುಷಿಯಾಗಿ ಮನ ತೆಲಾಡಿ ತೆಲಾಡಿ ಹೋಗಿದೆ ll

✍️ವೀರೇಶ್ ವಿ ಖೈರವಾಡಗಿ

- Veereshappa v khairawadagi

09 Jun 2026, 11:57 am
Download App from Playstore: