ಹೊಳಿತಾಳೆ ಚಂದದ ಚಲುವೆ
ಹೊಳಿತಾಳೆ...ಚಂದದ ಚಲುವೆ
ಹೊಂನ್ನಿನಂಗೆ..
ಮಿಂಚುತಾಳೆ.. ಚಂದದ ಚಲುವೆ
ಬೆಳ್ಳಿ ಚುಕ್ಕಿಯಂಗೆ
ಕುಣೀತಾಳೆ ಅಂದದ ಚಲುವೆ
ನವಿಲಿನ ನೃತ್ಯಾoಗಾನೇ..
ತಂಪಾದ ಗಾಳಿಯಲಿ ತೇಲಿಬಂತು
ಶ್ರೀಗಂಧದ ಸುವಾಸನೆ.... ll ಪಲ್ಲವಿ ll
ಹತ್ತಾರು ಊರು ಸುತ್ತಾಡಿ ಸುತ್ತಾಡಿ
ಸೋತೆನು ನಾನು
ಮನಬಯಸಿ ಸೈ ಎನಿಸಿದೆ ರತಿಯು
ನೀ ಸತಿ ನೀನು
ಬಾಯಾರಿಕೆಯಾಗಿ ಬಾವಿಗೆ ಹೋದೆ
ನಾ ನೀರಾಗಿ ಸಿಕ್ಕಿದೆ ನೀಲಾoಬಾರಿ ನೀ ll 1ll
ಮಲ್ಲಿಗೆ ತೋಟದಲಿ ಅರಳಿದ ಮಲ್ಲಿಗೆ
ಗಮ್ ಘಮಿಸುವ ಪರಿಮಳ.. ನೀ
ಯಾವ ಲೋಕದೊಳಗೆ ಅಡಿಗಿದೆ..
ನನಗಾಗಿ ಸ್ವರ್ಗ ಲೋಕದ ಸುಂದರಿ
ಸ್ವಪ್ನ ಲೋಕದ ಸುರ ಸುಂದರಿ ನೀ ll 2ll
✍️ವೀರೇಶ್ ವಿ ಖೈರವಾಡಗಿ
- Veereshappa v khairawadagi
13 Jun 2026, 04:11 pm
Download App from Playstore: