ಯಾರೇ ಚೆಲುವೆ ನೀನು...
ಯಾರೇ ಚೆಲುವೆ ನೀನು ?
ಕಣ್ಣೋಟ ಕೆಣಕುವಂತಿವೆ ,
ಆ ನಿನ್ನ ಅಧರಗಳು ಈ ನನ್ನ ದಾರಿ ತಪ್ಪಿಸುವಂತಿವೆ,
ಕೆನ್ನೆ ಕೈ ಚಾಚಿ ಕರೆದಂತಿದೆ,
ಮುಂಗುರುಳು ಮೈ-ಮನ ಸೆಳೆಯುತಿದೆ,
ಕೇಶ ರಾಶಿ ಕನಸಲೂ ಕೈ ಬಿಡದೆ ಕಾಡುವಂತಿದೆ,
ಮುಡಿದ ಮಲ್ಲಿಗೆ ಬಿಡದೆ ಬಾ ಎಂದು ಕೂಗಿದಂತಿದೆ,
ಎಷ್ಟೇ ವರ್ಣಿಸಿದರೂ ಈ ಅಂದಕ್ಕೆ ಸಮನಾಗದಂತಿದೆ,
ಯಾರೇ ಚೆಲುವೆ ನೀನು,
ನನ್ನ ಮನದಿ ನಿನ್ನ ಬಿಂಬ ಮರೆತರು ಮರೆಯದಂತೆ ಮರು ಮೂಡಿಸುತಿರುವೆ...
--- tippu ---
- tippu
15 Jun 2026, 10:11 pm
Download App from Playstore: