ಕನ್ನಡಮ್ಮನ ಹೃದಯಗೀತೆ
ಓ ಕನ್ನಡಮ್ಮನ ಹೃದಯ ಗೀತೆ
ಓ ಕನ್ನಡಮ್ಮನ ಹೃದಯ ಗೀತೆ..
ಸಾವಿರ ಭಾಷೆ ಕಲಿ ಕನ್ನಡವನ್ನೇ ನುಡಿ
ಇತಿಹಾಸ ಪುಟದಲಿ ಇರಲಿ ಕನ್ನಡ ನುಡಿ
ಕಲ್ಪವೃಕ್ಷ ಕನ್ನಡ ನಮ್ಮೆಲ್ಲರ ಅಂದದ ಗುಡಿ
ಕಾವೇರಿ ಈ ನೀರು ಸಿಹಿಕಬ್ಬಿನ ಹಾಲು
ತುಂಗೆ ಈ ನೀರು ಕನ್ನಡಮ್ಮನ ಎದೆಹಾಲು
ಕನ್ನಡದ ಮಗುವೇ ನಗುತಿರುವ ಸುಮವೇ...
ಲಾಲಿ ಹಾಡು ಜೋಗುಳದ ಹಾಡು ಕನ್ನಡ
ನಮ್ಮ ಜನುಮದಾತೆ ಕನ್ನಡ....
ನಮ್ಮೂಸಿರು ಮಾತೆ ಕನ್ನಡ....
ಪ್ರೀತಿಯಿಂದ ನುಡಿ..ಕನ್ನಡ
ಪ್ರೀತಿಯಿಂದ ನೆಡಿ..ಕನ್ನಡ
ಬಂಗಾರದ ನುಡಿ ಕನ್ನಡ..
ಶೃಂಗಾರದ ನುಡಿಗನ್ನಡ..
✍️ ವೀರೇಶ್ ವಿ ಖೈರವಾಡಗಿ
- Veereshappa v khairawadagi
19 Jun 2026, 11:45 pm
Download App from Playstore: