ಗೆಳೆತನ

ಗೆಳೆತನ ಮಾಡಲು ಜಾತಿ - ಮತವಿಲ್ಲ
ಗೆಳೆತನದಲ್ಲಿ ಮೇಲು - ಕೀಳಿಲ್ಲ
ಗೆಳೆತನದಲ್ಲಿದೆ ನೋವು - ನಲಿವು
ಗೆಳೆತನದಲ್ಲಿದೆ ಸೋಲು - ಗೆಲುವು
ಇದನ್ನರಿತು ಬಾಳುವ ಜನ ಹಲವು |

ಗೆಳೆತನವೆಂಬುದು ಸಮುದ್ರದ ಆಳ
ಈಜಲು ಬಲ್ಲವಗೆ ತುಂಬಾ ಸರಳ
ಗೆಳೆತನವೆಂಬುದು ಆಕಾಶದೆತ್ತರ
ಹಾರಲು ಬಲ್ಲವಗೆ ಬಹಳಾ ಹತ್ತಿರ
ಗೆಳೆತನವೆಂಬುದು ತುಂಬಾ ಸುಂದರ |

ಸುಳ್ಳು ವಂಚನೆ ಮೋಸದ ಗೆಳೆತನ
ಬರುವುದು ಮನುಜನ ಬಾಳಲಿ ಅನುಮಾನ
ತರುವುದು ಮನಸಲಿ ಕೆಟ್ಟ ಹಗೆತನ
ಕಂಬನಿ ವರೆಸುವ ನಿಜವಾದ ಸ್ನೇಹಿತ
ನೂರಾರು ವರುಷ ಬದುಕಲಿ ಶಾಶ್ವತ |

- A Akanksha

21 Jun 2026, 09:47 am
Download App from Playstore: