ಕವಿಯು ನಾನು ಕಲ್ಪನೆ ನೀನು
ಕವಿಯು ನಾನು ಓ ಚಲುವೆ ಓ ಓ ಓ
ಕವಿಯು ನಾನು ಓ ಚಲುವೆ ಓ ಓ ಓ
ಕಲ್ಪನೆ ನೀನು...
ಕಲ್ಪನೆ ನೀನು...
ಅಂತರರಂಗವು ನಾನು .
ಅಡಗಿರುವ ಹೂ ನೀನು
ಓ ಚಲುವೆ... ಓ ಚಲುವೆ...
ನಿನ್ನ ಈ ಕಣ್ಣೋಟ..
ಅಂದದ ಮೈ ಮಾಟ
ನನ್ನ ಹೃದಯದ ಅರಸಿ ನೀ..
ನನ್ನ ಹೃದಯದ ರೂಪಸಿ ನೀ
ಚಂದುಳ್ಳ ಚಲುವೆ ನೀನು
ರಾಣಿ ನೀ ನೀನು
ಮಹಾರಾಣಿ ನೀನು
ನಿನಗೆ ಮನಸೋತು ಬಂದ..
ರಾಜನು ನಾನು
ಮಹಾರಾಜನು ನಾನು
ನಿನ್ನ ಸುತ್ತ ಸುಳಿಯುವ
ಸುಂದರ ನಾನು
ನನ್ನ ಮನದೊಳ್
ಸುಂದರಿ ನೀನು
ಮಂದಾರ ಮಲ್ಲಿಗೆ ನೀನು
ಮಳೆ ಸುರಿಸೋ ಮಳೆ ನಾನು
ಚಲುವಾದ ಹೂವಾದೇ ಪ್ರೇಯಸಿ
ನಾ ಹೂ ದುಂಬಿಯಾದೆ ಮಾನಸಿ
✍️ ವೀರೇಶಪ್ಪ ವಿ ಕುಂಬಾರ ಖೈರವಾಡಗಿ
- Veereshappa v khairawadagi
23 Jun 2026, 09:35 am
Download App from Playstore: