ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು

ಬೆಳ್ಳಿ ಮುಗಿಲು ಬೆಳ್ಳೆಕ್ಕಿ ಸಾಲು...ಓ ಓ
ಬೆಳ್ಳಿ ಮುಗಿಲು ಬೆಳ್ಳಕ್ಕಿ ಸಾಲು... ಓ ಓ
ಆ ಚಲುವೆ ಮೊಗವು ಸುಂದರ ನಗುವು
ಕೆಂದಾವರೆ ಹರಳಿದ ಹಾಗೆ ಸುಮವು

ಚಂದವಾ ನೋಡು ಆಯಾಗಿ ಹಾಡು
ಆಯಾಗಿ ಹಾಡುತ ನೇಸರ ನೋಡು...
ಬಂಗಾರ ಬಣ್ಣದ ನೇಸರ ನೋಡು
ಮನೋಲ್ಲಾಸದಿ ಸಂತೋಷದಿ ಹಾಡು

ಗಾಳಿಯ ವೇಗದಿ ಮರಗಿಡ ತೂಗುಯ್ಯಾಲೆ
ತಂಪಾದ ನೆರಳಲಿ ತೂಗುಯ್ಯಾಲೆ
ಕರಿ ಮುಗಿಲು ಆ ಸಾಗರದ ಕಡಲು.
ಕರೀಮುಗಿಲು ಆ ಸಾಗರದ ಕಡಲು
ಚಂದಾಗಿ ಒಂದಾಗಿ ನಿಂತು ನಗಲು
ಮಳೆಗೆ ಭೂತಾಯಿ ಕಾದಿದೆ ಒಡಲು ಹೊ...

✍️ವೀರೇಶಪ್ಪ ವಿ ಖೈರವಾಡಗಿ





- Veereshappa v khairawadagi

24 Jun 2026, 03:18 pm
Download App from Playstore: