ಕನ್ನಡ ಪದವೇ ನುಡಿದ ನಾಲಿಗೆ ಚಂದ

ಕನ್ನಡ ಪದವೇ ನುಡಿದ ನಾಲಿಗೆ ಚಂದ
ಕನ್ನಡಪದದೊಳ್ ಮಾತೆಗೆ ಆನಂದ
ಕನ್ನಡನಾಡಿನಲಿ ಇರುವುದೇ ಚಂದದ ಶ್ರೀಗಂಧ

ಕಸ್ತೂರಿ ಪರಿಮಳ ಸೂಸುತ
ಮಲ್ಲಿಗೆ ಕಂಪನು ಬಿರುತ
ಮಲ್ಲಿಗೆ ಹೂ ಮಾಲೆ ಮೂಡಿದ ಚಾಮುಂಡೇಶ್ವರಿ
ನೆಲೆಸಿರುವ ಮೈಸೂರ ಸುಂದರ
ಈ ಕನ್ನಡ ನಾಡನ ವೈಭವವೇ ಚಂದದ ಚಿತ್ತಾರ

. ಕನ್ನಡ ಪದವೇ ನುಡಿದ ನಾಲಿಗೆ ಚಂದ

ನಾಗರಹೊಳೆ ಈ ನಾಡ ಸೌಂದರ್ಯದ ಕಳೆ
ಇಲ್ಲಿ ಬರುವವದು ಜೇನಿನ ಸುರಿಮಳೆ
ಹಸಿರ ಹಾಸಿದ ಚಲುವಿನ ಹಸಿರತೋರಣ
. ಸವಿಯಾದ ಸವಿ ಸವಿದ ಹೂ ಮನ
ಆಕಾಶದಲಕ್ಕೂ ಎತ್ತರ ಮರವೇ ಹಂದರ
ನವಿಲುಗಳ ನರ್ತನ ಈ ಕಾನನ ಸುಂದರ

. ಕನ್ನಡ ಪದವೇ ನುಡಿದ ನಾಲಿಗೆ ಚಂದ

ಆನೆಗಳ ಹಿಂಡು ಜಿಂಕೆಯಾದಂಡು ನೋಡುವ
. ಈ ಕನ್ನಡಮ್ಮನ ದೇಗುಲವ ನೋಡುವ
ಚಂದಕ್ಕಿಂತ ಚಂದ ನೋಡುದೇ ಆನಂದ..
ನಾಡ ಮಣ್ಣಲಿ ಈ ಸೀಮೆಯೇ ಸೌಗಂಧ....

ಕನ್ನಡ ಪದವೇ ನುಡಿದ ನಾಲಿಗೆಚಂದ

✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

29 Jun 2026, 07:24 am
Download App from Playstore: