ನನ್ನ ಪ್ರೇಮದ ಬಂಗಾರಿ

ನನ್ನ ಪ್ರೇಮದ ಬಂಗಾರಿ
ನಾ ತರುವೆ ಆನೆಯ ಅಂಬಾರಿ
ನೀ ಆನೆಯಮ್ಯಾಲೇರಿ
ಕುಳಿತಾಗ
ಶೃಂಗಾರದ ಐಸಿರಿ... ಶೃಂಗಾರದ ಐಸಿರಿ..
ಚಿನ್ನದ ಗೊಂಬೆ ನೀ.. ಬಣ್ಣದ ಗೊಂಬೆ ನೀ..
. ಕರೆದೋಯ್ಯುವೇ ನಿನ್ನ
ತೋರುವೆ ನಾರಿ ನಿನಗೆ
ತೋರುವೆ ಬಾದಾಮಿ ತಾಯಿಯ
ಬಾದಾಮಿ ಬನಶಂಕರಿ...

ಮಲ್ಲಿಗೆ ಸುಗಂಧ ಮಾಲೆ
ನಿನ್ನ ಮೂಡಿಯಲ್ಲಿ ಮೂಡಿಸುವೆ
. ನಿನ್ನಂದವೇ ನೋಡುವೆ
. ಮೈಸೂರು ಅರಮನೆಗೆ
. ಕರೆದೋಯ್ಯುವೇ ನಾರಿ...

. ಹೃದಯದ ಹುಮ್ಮಸಿನೊಂದಿಗೆ..
. ಅರಮನೆ ಚಂದನಾ ತೋರುವೆ
ಅಂದವಾ ನಿನಗೆ ತೋರುವೆ ಚಲುವೆ

. ಸಂಪಿಗೆ ಹೂ ಮುಡಿಗೆ ಮೂಡಿಸುವೆ
ಚಲುವಿನ ಸುಂದರಿ ಗೆಲುವಿನ ಸುಂದರಿ
. ಬೆಳ್ಳಿಬೆಳದಿಂಗಳ ತೆರಲಿ ಕೂರಿಸಿ
ನಿನ್ನಂದವ ನೋಡುವೆ ಮುದ್ದು ಚಲುವೆ

✍️ವೀರೇಶ್ ವಿ ಖೈರವಾಡಗಿ



- Veereshappa v khairawadagi

05 Jul 2026, 11:34 pm
Download App from Playstore: