ಬರಲಿ ಜನ್ಮ ಸಾವಿರ...

ಎದೆಯೊಳಗಿನ ನೂರು
ಪ್ರಶ್ನೆಗೆ
ಉತ್ತರ
ಹೇಳುವೆಯ
ಗೆಳತಿ

ಕಣ್ಣ
ನದಿ ಪಾತ್ರದಲ್ಲೀಗ
ನಿನ್ನ
ಒಲವಿನ
ಪ್ರವಾಹ

ನೂರು
ನೆನಪಿನ
ಪುಟಗಳಲ್ಲೂ
ನಿನ್ನ
ರೂಪಚಂದಿರ

ಕಾಯುವೆ
ನಿನಗಾಗಿ
ನೀ ಸಿಗುವುದಾದರೆ
ಬರಲಿ
ಜನ್ಮ
ಸಾವಿರ.....

- ಶಿಖರಸೂರ್ಯ

29 Aug 2016, 08:41 pm
Download App from Playstore: