ಚಂದನದ ಚಂದದ ಬಂಗಾರ ಗೊಂಬೆ
ಚಂದನದ ಚಂದದ ಬಂಗಾರದ ಗೊಂಬೆ
ನಕ್ಕರೆ ಅಕ್ಕರೆ ಸಕ್ಕರೆ ಈ ದಂತದ ಗೊಂಬೆ
ನಾ ಮೊದಲ ನೋಡಿದ ಚಲುವೇ ಅಪ್ಸರೆ
ನನ್ನ ಹೃದಯದೊಳಗೆ ಅರಳಿದ ತಾವರೆ
ನಕ್ಷತ್ರವೇ ನಾಚಿಸುವ ನವಿಲೂರ ನವಿಲೇ
ಕುಣಿದರೆ ಚಂದವೇ ನಿನ್ನಂದವೇ ಬಾಲೆ
ಬಳುಕುತ ಬಂದ ಸೊಪ್ನಾ ಲೋಕದ ಚಲುವೆ
ನೀನೇ ಬಂಗಾರ ಹಣೆಗೆ ಸಿಂಧೂರ ಶೃಂಗಾರ
ನಮ್ಮೂರ ಮನದರಸಿ ಮನದಲಿ ನೀ ನೆಲಸಿ
ಹಗಲಿರುಳು ನಿದ್ದೆಗೇಡಿಸಿ ಕಾಡುವೆ ಊರ್ವಶಿ
ಮಲ್ಲಿಗೆ ಹೂ ಮಳೆ ಹನಿ ನನ್ನದೇಯಲಿ ಸುರಿದೆ
ಚಂದದ ಚಿತ್ತಾರ ನನ್ನ ಹೃದಯವೇ ಅಲಂಕಾರ
✍️ ವೀ ವೀರೇಶ್ ಖೈರವಾಡಗಿ
- Veereshappa v khairawadagi
30 Jul 2026, 06:39 pm
Download App from Playstore: