ಮಾಯಾವಿ

ಅವನೇ ಹಾಗೆ ಮೊದಮೊದಲು ಒರಟನಾಗಿ ಕಂಡರು ನಂತರ ತುಂಟ ಹುಡುಗ ಎನಿಸಿದ..
ಕಪ್ಪು ಕಂಗಳ ಮೀಸೆ ಮರೆಯಲ್ಲಿ ನಗುವ ಮುದ್ದು ಚಂದಿರ..
ಕಾವಲಾಗುವ ನಾನಿಡುವ ಪ್ರತಿ ಹೆಜ್ಜೆಗೂ
ಹುಸಿಮುನಿಸು ತೋರುವ ಬಂದು ಮುಂಜಾನೆಯ ಕನಸಿಗೂ
ಕೈ ಹಿಡಿದರಾಗುವುದು ಹಿತ ಭಾವ
ಜೊತೆಯಲ್ಲಿ ನಿಂತರೆ ಮಾಸುವುದು ಭಯ
ಈ ಬರವಣಿಗೆಯ ನಕ್ಷತ್ರಕ್ಕೆ ಅವನೆಂದಿಗೂ ಅಭಿಮಾನಿಯೇ
ಅವನ ಬಗ್ಗೆ ಬರೆಯಲು ಮುಗಿದು ಹೋಗುವುದು ಲೇಖನಿಯೇ...

- Manasa S

03 Aug 2026, 02:07 am
Download App from Playstore: