ಮಮತೆ

ಸಂಜೆಯ ಸಮಯ ,
ಹಕ್ಕಿಗಳು ಗೂಡು ಸೇರುವ ಉತ್ಸಾಹ ದಲಿ ಹಾರುತ್ತಿರಲು..
ಒಂಟಿಯಾದ ಮರಿ ಹಕ್ಕಿಯೊಂದು ತನ್ನ ತಾಯಿಯ ನೆನೆದು ಅಳುತ್ತಿತ್ತು..
ತನ್ನ ಮರಿಗಾಗಿ ಆಹಾರ ತರಲು ಹೋದ ತಾಯಿ ಹಕ್ಕಿ ತನ್ನ ಗೂಡಿಗೆ ಮತ್ತೆ ಮರಳಲೇ ಇಲ್ಲ..
ಜೋರಾಗಿ ಬೀಸಿದ ಮಳೆಗೆ ಮರದ ಕೊಂಬೆ ಮುರಿದು ತಾಯಿ ಹಕ್ಕಿ ಜೀವ ಕಳೆದುಕೊಂಡಿತ್ತು
ಆದರೆ ಅದರ ಪರಿವಿಲ್ಲದ ಮರಿ ಹಕ್ಕಿ‌ ತನ್ನ ಅಮ್ಮನಿಗಾಗಿ ಹಂಬಲಿಸುತ್ತಿತ್ತು.
ವಿಪರ್ಯಾಸವೆಂದರೆ ಕಳೆದಹೋದ ತಾಯಿ ಜೀವ ಮತ್ತೆ ಬರಲ್ಲವೆಂಬ ಸತ್ಯ ಅರಿಯದ ಮರಿ ಹಕ್ಕಿ ತನ್ನ ಅಮ್ಮನಿಗಾಗಿ ದಾರಿ ಕಾಯುತ್ತಿತ್ತು..

- ನಮಿತ ಗಟ್ಟಿ

11 Sep 2026, 06:28 pm
Download App from Playstore: