ನಮ್ಮಮ್ಮ ಶಾರದೆ

ಅವಳು ಪ್ರೀತಿ ಮಮತೆಯ ಮಾತೃ ಸ್ವರೂಪ,
ಅವಳ ಕಣ್ತುಂಬಿಕೊಳ್ಳಲು ಬರುವರು‌ ಜನ ಸಾಗರ...
ಅವಳು ಎಲ್ಲರಂತಲ್ಲ
ಜಗತ್ತಿನ ಮೂಲೆಯಲ್ಲಿ ಎಲ್ಲೇ ಇದ್ದರೂ ಅವಳ ನೆನಪು ಬರದೇ ಇರದು
ಅವಳ ನೋಡಲೆಂದೆ ಈ ನನ್ನ ಕಣ್ಣುಗಳು ಕಾಯುತ್ತಿರುತ್ತದೆ ಪ್ರತಿ ವರ್ಷ...
ನೀ ಮಾಯೆಯಾದರೂ ತಾಯಿ ನಿನ್ನ ಇರುವಿಕೆ ಜನರ ಹೃದಯದಲ್ಲಿ ಅಜರಾಮರ
ಕೆಲಸಕ್ಕಾಗಿ ದೇಶ ಬಿಟ್ಟು ಬೇರೆ ಹೋದವರೂ ನಿನ್ನ ‌ ನೋಡಲು ಪ್ರತಿ ವರ್ಷ ತಪ್ಪದೇ ಬರುವರು..
ನೀ ಮಡಿಯುವ ಮಲ್ಲಿಗೆಯ ಪರಿಮಳ, ನಮ್ಮ ಊರಿನ ಸೊಬಗು ಜಗದಗಲ ಪಸರಿದೆ ಅಮ್ಮ...
ಹುಲಿ ವೇಷದ ಸೊಬಗು ಚಂದ ,
ಡೋಲು ವಾಲಗದ ಸ್ವರವೂ ಚಂದ,
ಪಟಾಕಿ ‌ಸದ್ದಿನ ಮೇಲವೂ ಚಂದ ,
ನೀ ಹೆಜ್ಜೆ ಹಾಕಿದೆಲ್ಲೆಡೆ ಸಂಭ್ರಮವೋ ಸಂಭ್ರಮ..
ಪಾರ್ವತಿ ದೇವಿ ಸ್ವರೂಪ ಶೈಲಪುತ್ರಿಯಾಗಿ,
ಜ್ಞಾನ, ಶಾಂತ ಸ್ವರೂಪಿಯಾದ ಬ್ರಹ್ಮ ಚಾರಿಣಿಯಾಗಿ,
ಅಂಧಕಾರ ದೂರಮಾಡುವ ಕಾಳರಾತ್ರಿಯಾಗಿ,
ವಾತ್ಸಲ್ಯದ ಮೂರ್ತರೂಪ ಸ್ಕಂದಮಾತೆಯಾಗಿ,
ಮಹಿಷಾಸುರನನ್ನು ಸಂಹರಿಸಿದ ಕಾತ್ಯಾಯಿನಿಯಾಗಿ,
ತೇಜಸ್ಸಿನ ಪರಮ ಪಾವನ ಸ್ವರೂಪ ಮಹಾಗೌರಿಯಾಗಿ,
ಭಕ್ತರ ಬೇಡಿಕೆಯನ್ನು ದಯಪಾಲಿಸುವ ಸಿದ್ಧಿದಾತ್ರಿ,
ಬ್ರಹ್ಮಾಂಡವನ್ನು ಸೃಷ್ಟಿಸಿದ ಜಗದೊಡತಿ ಕೂಷ್ಮಾಂಡ,
ಹಣೆಮೇಲೆ ಅರ್ಧಚಂದ್ರಾಕೃತಿಯ ಶಕ್ತಿಯ ರೂಪ ಚಂದ್ರಘಂಟಾ..
ನವದುರ್ಗೆಯಾಗಿ ನಮ್ಮನ್ನು ಸಲುಹುವ ತಾಯಿ..
ಆಕೆ ಬೇರಾರೂ ಅಲ್ಲ ನನ್ನಮ್ಮ ಕುದ್ರೋಳಿ ತಾಯಿ ಶಾರದಮ್ಮ ..!! .

- ನಮಿತ ಗಟ್ಟಿ

15 Sep 2026, 10:02 pm
Download App from Playstore: