ಅವಳು

ಅವಳ ಉಸಿರಿನಿಂದಲೇ ನನ್ನ ಉಸಿರಾಟ
ಅವಳ ಒಡನಾಟದಿಂದಲೇ ಕಲಿತೆ
ಒಲವಿನ ಪಾಠ
ಅವಳ ಲಾಲನೆ ಪಾಲನೆ ಯಿಂದ ಅರಿತೆ
ಒಡಲಿನ ಸಿಹಿಯೂಟ
ಅವಳ ಮಡಿಲ ಆಸರೆಯಿಂದ ದೊರೆಯಿತು
ಬದುಕಿನ ಬಯಲಾಟ
ಅವಳ ರೂಪ ಲಾವಣ್ಯ ದರ್ಶನವೇ
ನನ್ನ ಬಾಳ ಭವಿಷ್ಯದ ಮುನ್ನೋಟ
ಅವಳಿಂದಲೇ ನನಗೆ ಸಮಾಜದಲ್ಲಿ
ಪಡೆದೆ ಗಂಡು ಎಂಬ ಪಟ್ಟ.
ಯಾರವಳು ಯಾರಿವಳು
ಯಾರು ಎಂದು ತಿಳಿಯಿತೇ

ಬೇರೆ ಯಾರೂ ಅಲ್ಲ
ಜಗಕ್ಕೇ ಕಣ್ಣಾದವಳು
ನವಮಾಸ ಒಡಲಲ್ಲಿ ಹೊತ್ತು
ಹೇಳತೀರದ ವೇದನೆ ಸಹಿಸಿ
ಜನ್ನವಿತ್ತು
ಜಗತ್ತಿಗೆ ತಂದವಳು
ಹಡೆದ ತಾಯಿ, ಜನನಿ, ಹಡೆದವ್ವ, ನನ್ನವ್ವ

- ಚಿ.ಚೋರ

22 Sep 2026, 12:25 pm
Download App from Playstore: