ನೆನ್ನೆ ಗಳಲ್ಲೇ ಉಳಿದ ಹುಡುಗಿ
ಅವನು ವಿದಾಯ ಹೇಳಿದ ಆ ರೀತಿ
ಅಷ್ಟೇನೂ ದುಃಖ ತರಲಿಲ್ಲವೇನೋ,
ಅಥವಾ ಆ ನೋವು ಎಷ್ಟು ತೀವ್ರವಾಗಿತ್ತೆಂದರೆ
ಕಣ್ಣೀರು ಸುರಿಸಲೂ ಅವಳಿಗೆ ಸಾಧ್ಯವಾಗಲಿಲ್ಲವೋ.
ತನ್ನ ವಸ್ತುಗಳನ್ನೆಲ್ಲ ಮೂಟೆ ಕಟ್ಟಿ, ಬಾಗಿಲು ದಾಟಿ ಹೋದ ಅವನು,
ದೂರದೂರಿಗೆ ವಾಹನವನೇರಿ ಹೊರಟೇಬಿಟ್ಟನು,
ಅವಳು ಮಾತ್ರ ನಿನ್ನೆಗಳಲ್ಲೇ ಉಳಿದ ಹುಡುಗಿಯಾದಳು.
ಸಾಗರದಾಚೆಯ ಪರದೇಶಕ್ಕೆ ವಿಮಾನವೇರಿ ಹೋದನು ಅವನು,
ಮನೆಯಲ್ಲೇ ಕುಳಿತು ತಿಳಿಯಲು ಪ್ರಯತ್ನಿಸಿದಳು ಇವಳು
ಇಷ್ಟು ಹತ್ತಿರವಿದ್ದ ವ್ಯಕ್ತಿ ಹೇಗೆ ಇಷ್ಟು ದೂರ ಹೋದನೆಂದು?
ಮತ್ತೆ ಅವಳು ನಿನ್ನೆಗಳಲ್ಲೇ ಉಳಿದ ಹುಡುಗಿಯಾದಳು.
ಯಾವುದು ಸರಿ, ಯಾವುದು ತಪ್ಪು ಅವಳಿಗಿನ್ನೂ ತಿಳಿದಿಲ್ಲ,
ತಿಳಿದಿರುವುದೆಂದರೆ ಈ ದೀರ್ಘ ಕಾಯುವಿಕೆಯ ನೋವೊಂದೇ.
ಅವನಿಲ್ಲದ ದಿನಗಳಲ್ಲಿ ಸುರಿಸಿದ ಕಣ್ಣೀರ ಹನಿಗಳನು ಅವಳೆಂದೂ ಎಣಿಸಲಿಲ್ಲ,
ಏಕೆಂದರೆ ಅವಳ ಹೃದಯದಂತರಾಳದಲ್ಲಿ ದೃಢ ನಂಬಿಕೆಯಿದೆ
ಯಾವುದಾದರೊಂದು ದಿನ ಅವನು ಮರಳಿ ಬರುವನೆಂದು.
ಮತ್ತೆ ಅವಳು ನಿನ್ನೆಗಳಲ್ಲೇ ಉಳಿದ ಹುಡುಗಿಯಾದಳು.
- ಚೇತನ್ ಬಿ ಸಿ
02 Oct 2026, 07:54 pm
Download App from Playstore: