ಹರಿ - ಕರುಣಾ

ಸಿರಿ ಹರಿಯ ಚರಣ
ಅರಿ ಅದರ ಕರುಣ
ಹೋಗು ಅವನ ಶರಣ
ಬಾಗು ಮಸ್ತಕ ಪೂರಣ

ನಂಬು ಎಲ್ಲ ನೀ ಎಂದು
ಕಾಂಬು ಅವ ಭಕ್ತ ಬಂಧು
ಶ್ರೀತುಳಸಿಯೊಂದು ದಳ
ಸೋತುದೆಲ್ಲ ಕಳವಳ

ಬದುಕಿಗಿದೆ ಅವನ ಅಭಯ
ಅದಕೆ ಇತ್ತಿರುವ ಗೀತೆಯ
ಇಹನು ಅವ ಜೊತೆಗೆನುತ
ಸಹನೆಯಲಿ ಸಾಗು ನಗುನಗುತ

ಕೃಷ್ಣಪದ-ಭಾಸ್ಕರ

- BHASKAR BR

16 Oct 2026, 05:15 pm
Download App from Playstore: