ಹಣದ ಮಹಿಮೆ

ಹಣ ಒಂದು ವಸ್ತು,ಕಾಗದ ನಾಣ್ಯ
ಅದರ ಗಳಿಕೆ ಸೇವೆ ಕಾರ್ಯ ಶ್ರಮ
ಸರಿಯೇ...ಅಷ್ಟೆಯೇ.. ಊಹೂ
ಅದರ ಸ್ವರೂಪವೇ ಬೇರೆ
ಅದೊಂದು ಅಹಂಕಾರ,ದರ್ಪ,ಸ್ವಾರ್ಥ
ಹಿರಿಮೆ ದೊಡ್ಡಸ್ತಿಕೆ ಮದ ಕೊಬ್ಬು ಅದನ್ನು ಪಡೆದವನಿಗೆ ಆಗುವ ಮಾನಸಿಕ ಬದಲಾವಣೆ, ಭ್ರಮಣೆ
ಸಿರಿವಂತಿಕೆಯ ಅಪರಾವತಾರ
ಬಯಸಿ ಇಲ್ಲದವಗೆ?
ಬಡತನ ಕೀಳರಿಮೆ,ನಷ್ಟ,ದೌರ್ಭಾಗ್ಯ
ಕಡೆಗೆ...ಜೀವಂತ ಹೆಣ!
ಹೆಚ್ಚಿರುವಾಗ...
ಶ್ರೀಮಂತಿಕೆ, ಹಣದ ಬಗ್ಗೆ ವಾಕರಿಕೆ.
ಕೊಡುವ ಮನಸ್ಸಿಗೆ ಕಡಿವಾಣ
ಅಜ್ಜಿಯ ಕೋಳಿಯ ಕಥೆಯ ಉನ್ಮಾದ
ಹಣ ನಗುವ ಸುಡುವ ಮೋಜಿನ ಬೆಂಕಿ
ಹಣವೇ ನಿನ್ನಯ ಗುಣ ಎಷ್ಟು ವರ್ಣಸಲಯ್ಯ
ಹಣವಿಲ್ಲದ ಹೆಣ ಕನ್ಯಾ ಮನುಜಾ..


- Jayakumar S

18 Oct 2026, 04:20 pm
Download App from Playstore: