ಕವನ
ಅರಳಿದ ಹೂವಿನ ಭಾವವು ನೀನು
ನನ್ನ ಜೋತೆಗಾರ್ತಿ
ಕೆನ್ನೆಯು ಏತಕೆ ಕೆಂಪು ತುಂಬಿದೆ
ಹೇಳು ಏನಂತಿ
ಕಂಡರೆ ನಿನ್ನ ಕಳವಳ ಎದೆಯಲಿ
ಸುಮ್ಮನೆ ಯಾಕ ಇರುತಿ
ಪ್ರೀತಿಯ ಸ್ವರವನು ಮಾತಲಿ ಗುನಗು
ಈ ಹೃದಯದಿ ಇರುವಂತಿ
ಎಷ್ಟು ಜನ್ಮದ ಪುಣ್ಯಯೋ ಕಾಣೆ
ನನಗೆ ಈ ದೊರತಿ
ವಂದನೆ ಹೇಳುವೆ ಕವಿ ಮನದಲ್ಲಿ
ಜೀವನ ಸುಖ ಶಾಂತಿ
ದೂರಕೆ ಹೋಗದೆ ಹತ್ತಿರ ಬಾರೆ
ಪ್ರೇಮದ ಸತಿ ಅರಸಿ
ನಿನ್ನ ಆಸೆಯ ಬಲ್ಲೆನು ಬಾ
ನನ್ನ ಜೋತೆಗಾರ್ತಿ..
ರಚನೆ : ಜಿ. ವಿ. ಮೇತ್ರಿ..
- ಜಿ. ವಿ. ಮೇತ್ರಿ
22 Oct 2026, 11:08 pm
Download App from Playstore: