ಶತಕೋಟಿ ನಮನ
ಭಾರತಾಂಬೆಯ ವೀರಪುತ್ರರೇ ನಿಮಗಿದೋ ನನ್ನ ನಮನ
ಹಗಲಿರುಳೆನ್ನದೆ ಹೋರಾಡುವಿರಿ ಬಿಟ್ಟು ಭಯಾನ
ಜನ ರಕ್ಷಣೆ ನಮ್ಮ ಹೊಣೆ ಎಂದು ಪಣ ತೊಟ್ಟಿರುವಿರಿ
ತನು ಮನ ಮುಡಿಪಿಟ್ಟು ಎದೆಗುಂದದೆ ಕಾದಾಡುವಿರಿ
ಜನ್ಮ ಭೂಮಿಯ ನೆಮ್ಮದಿಗಾಗಿ ಸರ್ವಸ್ವವನ್ನೂ ತ್ಯಜಿಸಿ
ನಿಸ್ವಾರ್ಥ ಸೇವೆಯ ಭಾರತಾಂಬೆಗೆ ಸಲ್ಲಿಸಿ
ಪ್ರಾಣದ ಹಂಗನ್ನು ತೊರೆದು ಗಡಿಯಲ್ಲಿ ಕಾಲಿರಿಸಿ
ತಾಯ್ನೆಲ ಕಾಯಲು ಅರಿಗಳ ಶಿರವ ಧರೆಗುರುಳಿಸಿ
ಬಂದ ಗುಂಡಿಗೆ ಮುನ್ನುಗ್ಗಿ ಅಸುನೀಗುವರು ಎಷ್ಟೋ ಕಲಿಗಳು
ವೀರ ಮರಣವ ಹೊಂದಿ ಭೂ ಒಡಲ ಸೇರುವರು
ಸೈನಿಕರ ತ್ಯಾಗ ಬಲಿದಾನವ ಮರೆತ ಜನರು
ಜಾತಿ ಮತವೆಂದು ಹೊಡೆದಾಡುತ್ತಿರುವರು
ವೈರಿಯ ಗುಂಡಿಗೆ ಎದೆಯೊಡ್ಡಿ ಗಡಿ ಕಾಯುವ ಸುಪುತ್ರರಿಗೆ ಯಾವುದು ವರ್ಣ
ತನ್ನವರ ಮಮತೆಯ ಮರೆತು ಮಾತೃಭೂಮಿ ರಕ್ಷಣೆಗೆ ಮುನ್ನುಗ್ಗುವ ಸಿಪಾಯಿಗೆ ಯಾವ ಧರ್ಮ
ಯೋಧರ ಸಾಹಸ ಸಾಧನೆಗಳಿಗೆ ಪರಿಧಿಯಿಲ್ಲ
ಜೀವಕ್ಕೆ ಜೀವ ಕೊಟ್ಟು ನಮ್ಮನ್ನೆಲ್ಲಾ ಕಾಯುತ್ತಿರುವ
ವೀರ ಯೋಧರಿಗೆ ನನ್ನ ಭಾವಪೂರ್ಣ ನಮನ
✍️ ರಂಜಿತ ಪ್ರಕಾಶ್ (ರಂ.ಪಿ)
- ರಂಜಿತ ಪ್ರಕಾಶ್ (ರಂ.ಪಿ)
25 Oct 2026, 05:46 pm
Download App from Playstore: