ಮೈಸೂರಿನ ಮಹಾರಾಣಿ

ಮೈಸೂರಿನ ಮಹಾರಾಣಿ....
ಬೆಟ್ಟದ ಚಾಮುಂಡಿ
ಆನೆಯ ಅಂಬಾರಿ
ತಾಯಿಯ...ಸವಾರಿ
ನೋಡಲು ಅಂದವೇ
ನೋಡಲು ಆನಂದವೇ..ಹೇ...ಹೇ...ll

ಮಲ್ಲಿಗೆ ಹೂ ಮಾಲೆ
ಘಮ್ಮಿಸುತಿರುವೆ...ತಾಯಿ ಚಾಮುಂಡಿ...
ನಿನ್ನ ಸಡಗರ ಸಂಭ್ರಮ..
ನೋಡುವ ವೈಭವವೇ ಸೌಭಾಗ್ಯವೇ...
ಕರುಣೆಯ ಮಮಕಾರ ಮಾಯಿ
ನನ್ನ ಹೃದಯದಲಿ ನೆಲೆಸಿ
ನಮ್ಮನ್ನ ಕಾಪಾಡೋ ಶ್ರೀದೇವಿ

ಮೈಸೂರಿನ ಮಾಹಾರಾಣಿ...
ಬೆಟ್ಟದ ಚಾಮುಂಡಿ...

ತುಪ್ಪದ ದೀಪದಲಿ ಹೊಳೆಯುವ
ಸೌಂದರ್ಯ ರೂಪಿಣಿ
ಅರಿಸಿನ ಕುಂಕುಮ ಗಂಧದಲಿ
ಅಲಂಕಾರದಲಿ ನಿನ್ನ ರೂಪ
ಜಗಮಗಿಸುವ ಚಾಮುಂಡಿ ತಾಯಿಯೇ
ಚಂದದ ಶ್ರೀದೇವಿಯೇ
ಮೈಸಾಸೂರ ಮರ್ದಿನೀಯೇ
ಸುಂದರ ಮಹಾಮಾತೆಯೇ

ಮೈಸೂರಿನ ಮಹಾರಾಣಿ
ಬೆಟ್ಟದ ಚಾಮುಂಡಿ...

✍️ ವೀರೇಶ್ ಕುಂಬಾರ ವಿ ಖೈರವಾಡಗಿ




- Veereshappa v khairawadagi

25 Oct 2026, 08:47 pm
Download App from Playstore: