ನಾ ನೆಟ್ಟ ಗಿಡ



ನಾ ನೆಟ್ಟ ಗಿಡವು ನನಗಲ್ಲದೆ ಇತರರಿಗೂ ನೆರಳ ನೀಡುವ ಬಗೆಯ  ಕಂಡು ನಾ ಬಲು ನಲಿದೆ
ಯಾವ ಸ್ವಾರ್ಥವು ಇಲ್ಲದೆ ಚಾಚಿದ ರೆಂಬೆ ಕೊಂಬೆಯ ಕಂಡು ಬಲು ಖುಷಿಲಿ ನಾ  ಹಿಗ್ಗಿದೆ
ನಾನು ನನ್ನದೆಂಬ ಜಂಬ ಇಲ್ಲದೆ
ಚಿರುರೊಡೆದ ಚೆಲುವ ನೋಡಿ  ನಾ ನಾಚಿದೆ ಗಿಡದ ಗುಣವ ನಾ ಕಂಡು ಮುಖವಾಡ ಇರುವ ಮನುಜನೆ ಸ್ವಾರ್ಥ ಸುಖವ ಕಾಣಲು ತಾ ತವಕಿಸಿ ಇತರರ
ತಾ ಅಣುಕಿಸಿ ಇದ್ದ ಬಿದ್ದ ಸೃಷ್ಟಿ ಸೌಂದರ್ಯವನ್ನೆಲ್ಲ ನುಂಗಿ
ನೀರ ಕುಡಿದು ನನ್ನದೆಂಬ ಹುಂಬ ಜಂಬದಲಿ ಮೆರೆದಿರಲು   ನಾಲ್ಕು ದಿನದ ಬದುಕ ಬಗೆಯ ಬ್ರಮೆಯ ಈ  ಸ್ವಾರ್ಥ ಸಂತೆಯಲಿ
ನಾ ನೆಟ್ಟ ಗಿಡವೇ ಕ್ಷಮಿಸೆನ್ನ ನಿನ್ನಂತಾಗಲಿಲ್ಲ ನಾ ನಾ ಮನುಜ

 


- Hanu R

12 Nov 2026, 03:49 pm
Download App from Playstore: