ಜುಲ್ಕಾಫಿಯಾ ಗಜಲ್

ಮನಸುಗಳ ಭಾವನದಿಗಳು
ಕೂಡಲು ಸಂಗಮವಿದೆ ಸಾಕಿ /
ಮನದನಿ ಮಧುರವಾಗಿ ಕೇಳಲು ಹೃದಯವಿದೆ ಸಾಕಿ/

ನೂರು ರಾಗವೇಕೆ
ಸರಾಗವಾಗಿದೆ ಮೆಲ್ಲಸಿರು /
ಪಲ್ಲವಿಯು ಪಿಸುಮಾತಲಿ
ಹಾಡಲು ಪಲ್ಲಂಗವಿದೆ ಸಾಕಿ /

ಬಾಳಲಿ ನಿತ್ಯ ಚಾಕರಿಗಳ
ಗುಡಿಸುತ ಸಾರಿಸುತಿಹೆ /
ಮಲ್ಲಿಗೆಯಿಲ್ಲದ ತಲೆಯಲು
ಸುಗಂಧವಿದೆ ಸಾಕಿ /

ಅಂದಿತ್ತು ಕೂಲಿಯಿರದ
ಕ್ಷಣಗಳ ಕಾರದಲಿ ಕಣ್ಣೀರ ಉಪ್ಪು /
ಇಂದೀ ಬಾಳಲಿ ಕಾಯಕವಿರಲು ಕೈಲಾಸವಿದೆ ಸಾಕಿ/

ಶಿವಪ್ರಸಾದ್ ಆರಾಧ್ಯ
ಸಂಗಮದಿ ಮೇಳೈಸುವೆ/
ಪ್ರಸಾದ ರೂಪಿಣಿಯಿರಲು
ಆರಾಧ್ಯನಾದೆ ಸಾಕಿ/

ಶಿವಪ್ರಸಾದ್ ಆರಾಧ್ಯ

- shivaprasad aradhya

22 Nov 2026, 07:38 am
Download App from Playstore: