ನೆನಪಿನ ಪುಟಗಳು
ಪ್ರೀತಿಯ ಅಪ್ಪ ಅಮ್ಮ,,,,
ಹೆಜ್ಜೆ ಇಡುವುದನ್ನು ಹೇಳಿ ಕೊಟ್ಟವರು ನೀವು
ನಾ ಇಡುವ ಪ್ರತಿ ಹೆಜ್ಜೆಯಲ್ಲೂ ನೀವಿದ್ದೀರಿ..
ಧೈರ್ಯದಿಂದ ಇರಲು ಕಲಿಸಿದವರು ನೀವು
ನಾ ಕುಗ್ಗಿದಾಗ ನಿಮ್ಮ ನೆನಪು ನನ್ನ ಧೈರ್ಯ..
ಗೆಲುವಿನ ಅರ್ಥ ತಿಳಿಹೇಳಿದವರು ನೀವು
ಆದರೆ ನಾ ಸೊತಾಗ ನನ್ನ ಗೆಲುವೇ ನೀವು..
ಏನೇ ಆದರೂ ಅಳಬಾರದು ಎಂದವರು ನೀವು
ಅದೇ ಕಣ್ಣುಗಳಲ್ಲಿ ನೀರು ಬಂದಾಗ ನಿಮ್ಮ ಕಾಣದ ಕೈಗಳು ನನ್ನ ಜೊತೆಯಾದವು..
ಇಷ್ಟು ವರ್ಷ ನಿಮ್ಮನ್ನು ನೆನೆಯದ ದಿನವಿಲ್ಲ
ಎಷ್ಟೇ ವರ್ಷ ಕಳೆದರೂ ನಿಮ್ಮ ನೆನಪುಗಳನ್ನು ನನ್ನಲ್ಲಿ ಸದಾ ಜೀವಂತವಾಗಿರುತ್ತದೆ...
ಈ ನಿಮ್ಮ ಮಗು ನಿಮಗಾಗಿ ನಿಮ್ಮ ಪ್ರೀತಿಗಾಗಿ ಹಾತೊರೆಯುತ್ತಿದೆ
ಅಪ್ಪ... ಮತ್ತೆ ನಿನ್ನ ಹೆಗಲ ಮೇಲೆ ಕೂರಲು,, ನೀ ಹೇಳುವ ಕತೆ ಕೇಳಲು,, ನಿನ್ನ ಜೊತೆ ಆಡಲು
ಅಮ್ಮ... ಮತ್ತೆ ನಿನ್ನ ಕೈ ತುತ್ತು ತಿನ್ನಲು,, ನಿನ್ನ ಪ್ರೀತಿಗಾಗಿ,, ನಿನ್ನ ಮಡಿಲಲ್ಲಿ ಮಲಗಿ ಎಲ್ಲಾ ನೋವು ಮರೆಯಲು..
ಇಂತಿ ನಿಮ್ಮ ಪ್ರೀತಿಯ ಮಗಳು
ಜ್ಯೋತಿ
೨೫/೧೧/೨೦೨೬
- Jyothi
25 Nov 2026, 09:07 pm
Download App from Playstore: