?ಅಮ್ಮ?
ಬೆಳಗಿನ ಸೂರ್ಯನ ಮೊದಲ ಕಿರಣ ನೀನು,?
ನನ್ನ ಬದುಕಿನ ಸುಂದರ ಸ್ಪಂದನ ನೀನು.?
ಮಾತಿಲ್ಲದ ನೋವನು ಅರಿಯುವ ಹೃದಯ,?❤️?
ನನ್ನ ಕನಸುಗಳಿಗೆ ರೆಕ್ಕೆಯ ನೀಡುವ ಮಾಯೆ.??
ನಿನ್ನ ನಗುವಿನಲ್ಲಿ ಸಾವಿರ ಹೂಗಳ ಕಂಪು,?
ನಿನ್ನ ಮಾತಿನಲ್ಲಿ ಪ್ರೀತಿಯ ಇಂಪು.?
ಜಗದ ಸಂಪತ್ತೆಲ್ಲ ಒಂದೆಡೆ ಇರಲಿ,?
ನಿನ್ನ ಮಮತೆಯಮುಂದೆ ಎಲ್ಲವೂ ಕಡಿಮೆಯಾಗಲಿ?
ನನ್ನ ಪುಟ್ಟ ಹೆಜ್ಜೆಗೆ ದಾರಿಯಾದೆ,?
ನನ್ನ ತಪ್ಪುಗಳಿಗೆ ಪಾಠವಾದೆ.?
ನಿನ್ನ ಪ್ರೀತಿಗೆ ಬೆಲೆಯೇ ಇಲ್ಲ,?
ಅಮ್ಮಾ, ನಿನಗೆ ಸಮನಾದವರೇ ಇಲ್ಲ! ?
- Haripriyyahh
28 Nov 2026, 12:41 pm
Download App from Playstore: