ಕಾಣದ ದೇವರನು
ಇಲ್ಲದ ದೇವರನು ಪೂಜಿಸಲಾರೆ...
ಅವ ಕಲ್ಲುಬೊಂಬೆ ಮಾತ್ರ.....
ಕಾಣದ ದೇವರನು ಹುಡುಕಲಾರೆ ನನ್ನ್ಯೋಚನೆಗಿಂತ ದೊಡ್ಡ ದೇವರಿರಲಾರ...
ಅವ ಸಾಮಾನ್ಯ ಕೆಲಸ ಕೂಡ ಮಾಡಲಾರ....
ಎಷ್ಟೋ ಭಕ್ತಿಯಿಂದರ್ಪಿಸಿದ ನೈವೇದ್ಯವನೆ ತಿನ್ನಲಾರದವ...
ನನ್ನ ಹಸಿವಿನ್ನೆಲ್ಲಿ ನೀಗಿಸುವನಾತ...
ನಾ ಅವಗಿಂತ ಶತ ಪಟ್ಟು ವಾಸಿ .
ನನ್ನೂಟವನು ನಿತ್ಯ ದುಡಿದು ತಿನ್ನುವೆನಲ್ಲ
ಬೀದಿಯಲಿ ಕಂಡ ಕುರುಡನನು ಗುರಿ ಮುಟ್ಟಿಸುವೆನಲ್ಲ.....
ಅನಾತರನೂ ಕಂಡು,ನನ್ನನೂ ಹೋಲಿಸಿ ವ್ಯತೆ ಪಡುವೆನಲ್ಲ!
ಆ ಶತಮೂರ್ಖನಿರುವನೆಂಬ ಬಿಮ್ಮು ನಿಮ್ಮಲ್ಲಿರುವುದಲ್ಲ
ನಾನೂ ಮೂರ್ಖನೇ ನಿಮ್ಮೋಚನೆಯಲ್ಲಿ...ಇರಬಹುದು.
ನಿಮ್ಮರ್ಥದಲಿ...... ನಿಮ್ಮರ್ಥದಲಿ......
ತಾಯಿ ಶಾರದೆ,ಪಿತೃ ಬ್ರಹ್ಮ,ನೆರೆಯಲಿರುವವರು ಮಿಕ್ಕ ಪೂಜೆಗರ್ಹರು....
ನೂರಾಗಿಹರಾಗಲೆ ಸಾವಿರ ಮೂರ್ತಿಗಳೇಕೆಮಗೆ.....
ಸೂರ್ಯನೊಬ್ಬ ಮೂರ್ತಿಯನು ನಂಬೋಣ.
ನೇತ್ರ ಮುನ್ನಿನ ಮಾತಾ ಪಿತೃರನ್ನು ಪೂಜಿಸೋಣ....
ಈ ಎರಡಕ್ಷರಗಳ ಸಾಲನು ಪ್ರೀತಿಸೋಣ..........
-ರಚನೆ.
-ನವೀನ್ ಕುಮಾರ್.ಜೆ.ಟಿ.
-14.01.2015.
- ನವೀನ್ ಕುಮಾರ್.ಜೆ.ಟಿ
15 Jan 2015, 05:48 am
Download App from Playstore: