ಮೊದಲ ಪೂಜೆ
ಮೊದಲ ಪೂಜೆಯು ನಿನಗೆ ಗಣನಾಯಕ
ನಮ್ಮನ್ನು ಕಾಪಾಡುವ ನಿಜ ಪಾಲಕ
ವಿದ್ಯೆ ಬುದ್ದಿಯನು ಕೊಡುವ ಸಿದ್ಧಿ ವಿನಾಯಕ
ಅಂಧರ ಕಣ್ಣಲಿ ಬೆಳಕು ಮೂಡಿಸೋ
ದೃಷ್ಠಿ ವಿನಾಯಕ
ಗೌರಿಶಂಕರರ ಪ್ರೇಮದ ಪುತ್ರ
ಜಪಿಸಿದರು ಭಕುತರು ನಿನ್ನ ಸಾವಿರ ಮಂತ್ರ
ಗಣನಾಯಕ ಗಣನಾಯಕ
ಮಾತಪಿತರೇ ದೇವರೆಂದು
ಸುತ್ತಿದೆ ಅವರನು ನೀ ಅಂದು
ಗಣನಾಯಕ ಗಣನಾಯಕ
ವೇಗದಲಿ ನೀ ಬರೆದೆ ಮಹಾಭಾರತ
ರಾಗಗಳ ಗುನುಗಿದ ಮಹಾಮಾಂತ್ರಿಕ
ಗಣನಾಯಕ ಗಣನಾಯಕ
ದೇವಗಣಗಳ ನಾಯಕನಾಗಿ
ಸಲಹಿದೆ ಸರ್ವರ ಪಾಲಕನಾಗಿ
ಗಣನಾಯಕ ಗಣನಾಯಕ
- ಆನಂದ್
05 Sep 2016, 09:40 am
Download App from Playstore: