ನಾ ನೆಟ್ಟ ಬಳ್ಳಿ

ನಾ ನೆಟ್ಟ ಬಳ್ಳಿಗೆ
ಹೂವೊಂದು ಆಗದೇ
ಬಿಸಿಲಿನ ಬೇಗೆಗೆ
ಆ ಬಳ್ಳಿ ಬಾಡಿದೆ!!

ಮಳೆಯಂತೆ ನಾನಿಂದು
ಕಣ್ಣೀರ ಸುರಿಸಿದರೂ
ಚಿಗುರೊಡೆದು ಬಾರದು
ಆ ಪ್ರೀತಿ ಬಳ್ಳಿಯು!!

ಕನಸುಗಳ ನಾ ಹೆಣೆದು
ನನ್ನ ನೆರಳ ಕರೆತಂದು
ತಂಪೆರೆದು ಬಿಸಿಲ ತಡೆವೆ
ಹಿಂತಿರುಗಬಾರದೇ!!

ನಿನಗಾಗಿ ಸೊಂಪು ಗಾಳಿ
ನನ್ನುಸಿರಿನಿಂದ ಕೊಡುವೆ
ನನಗೂನೂ ನಿನ್ನ ಉಸಿರ ಗಾಳಿ
ನೀಡೆಂದು ಕಾಯುವೆ!!

- ಪಿ.ಜಿ.ಜ್ಯೋತಿ

07 Sep 2016, 06:59 pm
Download App from Playstore: