ಯವ್ವನ
ಕನಸುಗಳು ಗರಿ ಬಿಚ್ಚಿ
ನೆನಪುಗಳು ಮರುಕಳಿಸಿ
ಬಯಕೆಗಳು ಬಯಸುತಿವೆ ನಿನ್ನ!!
ನೀನಿರದ ಈ ಬಾಳು
ಬದುಕಲ್ಲಿ ಬೇಸರವು
ಒಂಟಿತನ ಎನಿಸುತಿದೆ ದಿನವೂ!!
ದಿನವೆಲ್ಲ ನಿನ್ನ ನೆನೆದು
ತಿರು ತಿರುಗಿ ನಾ ಅಲೆದು
ಕುಸಿದಿಹುದು ಈ ನನ್ನ ಬಲವು!!
ನಿನಗಾಗಿ ಕಾಯುತಲೆ
ಕಳೆದಿಹುದು ಯವ್ವನವು
ಬಯಸಿದರೆ ಮರಳುವುದೇ ಆ ದಿನವು!!
- ಪಿ.ಜಿ.ಜ್ಯೋತಿ
07 Sep 2016, 07:11 pm
Download App from Playstore: