ನೀರ ಮೇಲಿನ ಗುಳ್ಳೆ
ನೀರ ಮೇಲಿನ ಗುಳ್ಳೆಯೊಂದು
ಚಲಿಸೊ ವೇಗವು ಸುಂದರ!!
ಆಡುತಾಡುತ ತನ್ನ ಲೀಲೆಯ
ತೋರಿ ಚಲಿಸುವಾ ಹಂದರ!!
ನನ್ನ ಅಂದವು ಎಂತ ಚೆಂದವು
ನಾಚಬೇಕಿದೆ ಚಂದಿರ!!
ರತ್ನದುಂಗುರ ಯಾವ ಲೆಕ್ಕಕೆ
ನಾನೇ ಮಿಂಚಿನ ಉಂಗುರ!!
ಊರ ರಾಜನು ನನ್ನ ಕಂಡರೆ
ಮಡದಿಯನ್ನೇ ತೊರೆಯುವ!!
ನನ್ನ ಮೋಹಿಸಿ ಸರಸವಾಡಲು
ಹಿಂದೆ ಮುಂದೆ ಸುತ್ತುವ!!
ಯಾರು ಸಾಟಿಯು ನನ್ನ ನಿಲುವಿಗೆ
ಬರಲಿ ನಾಳೆ ಇಲ್ಲಿಗೆ!!
ಇಲ್ಲಿ ಬಂದರೆ ನನ್ನ ಕಂಡರೆ
ಸೊರಗಿ ಹೋಗುವೆ ಎಚ್ಚರ!!
ತನ್ನ ಭಾವವ ಬೀಗಿ ತೇಗುತ
ನೀರಿನಲ್ಲಿ ಚಲಿಸುತ!!
ಸುಳಿಗೆ ಸಿಲುಕಿ ಒಡೆದು ಹೋಯ್ತು
ನೀರ ಮೇಲಿನ ಗುಳ್ಳೆಯು!!
- ಪಿ.ಜಿ.ಜ್ಯೋತಿ
08 Sep 2016, 08:09 am
Download App from Playstore: