"ಕಮರದ ಹಗೆತನ,"

ಏನೆಂದು ಕರೆಯಲಿ
ಏನೆಂದು ಬಣ್ಣಿಸಲಿ
ನಿನ್ನಯ ಕರಾಮತ್ತನ್ನು

ಮಾತಲಿ ಧರಿಸಿರುವಿ ಅಮ್ರತದ ಸುಧೆಯನು
ಎದೆಯೊಳಗೆ ಉರಿಸಿದೆ ಹಾಲಹಾಲವನು
ಕಾವುವ ರಿಸಿಗಳಲಿ ಹರುಷವ ಬತ್ತಿಸಿ ಜಗದಲಿ ಬೆಳಗಿಸಿದಿ ದುರ್ನಾಮವನ

ಉಸಿರಿಗೊಮ್ಮೆ
ಜನನ-ಮರಣವ ಎನ್ನದೆ ತಪ್ಪನು ಮನ್ನಿಸಿದ
ಕರುಣಾ ಸಾಗರ ಶಾಂತಿಯ ದೂತನಿಗೆ
ಕರಗಳಲಿ ನೆತ್ತರವ ತರಿಸಿದಿ,

ಧರೆಗೆ ಧರುಮವು ದೊಡ್ಡದೆಂದು ಸಾರಲು ಹೊರಟ ಯಮ ಸುತನಿಗೆ ಕಾವಿಯು ತೊಡಿಸಿ ,
ನಾಮವ ಬದಲಿಸಿ
ಜೂಜಾಟದ ಬಣ್ಣವಹಚ್ಚಿದಿ
ಕಾರಣಿಕ ಪುರುಷನ ತೆರೆಮರೆಯಲಿಡಗಿಸಿದಿ.

ಮುಟ್ಟದ ಕೈಗಳನ್ನ ಮುಟ್ಟಿ ಕುಲಕಟ್ಟೆಯನು ಒಡೆದ ಕಾಯಕಯೋಗಿಯ ಪುರವನ ಬಿಡಿಸಿ ಪವಡಿಸಿದಿ ಸಂಗಮ ಸಾಗರದಲಿ

ಬಿಡಲಿಲ ನೀ ಪಿತ ಸುತರನ್ನು ನಚ್ಚಿದ
ಪ್ರಾಣ ಮಿತ್ರರನು
ಕ್ರತಾದಿ ಕಲಿಯುಗತನಕ
ಚಾಚಿದೆ ನಿನ್ನಯ ಬಾಹುಗಳು
ಬೇಯುತಿದೆ ಜಗವೆಲ್ಲ

ನಮ್ಮಲ್ಲಿಹುದು ಮಂದಿರ ಮಸೀದಿ,ಇಗರ್ಜಿ ರಾಮ,ರಹೀಮ್,ಏಸು.
ನಿನಗಿಲ್ಲವೆ?
ಜಾತಿ ವೈಷಮ್ಯ ಅದಲ್ಲವೇ ಅಕ್ಷಮ್ಯ
ತೊರೆಯಬಾರದೆ? ಇವರಲ್ಲೊಬ್ಬರನಾದರೂ
ಎಷ್ಟೊಂದು ಕಪಟಿ ನೀ

ತ್ಯಜಿಸ ಬಲ್ಲೆಯಾ?
ಎಂದಿಗಾದರೂ ನೀ ನಮ್ಮನು
ಅಳಿದ್ಹೋಗಿ ಉದ್ಧರಿಸುವಿಯಾ?
ಈ ಮನುಕುಲವನು.
'ಪ್ರೇಯಸಿ'

- "ಪ್ರೇಯಸಿ"

11 Sep 2016, 07:28 am
Download App from Playstore: