ಬಸ್ ಮೆಂಟಿನ ಬಾಲ್ಯದ ಲವ್

ಬಾಲವಿಲ್ಲದ ಬಾಲ್ಯಾನಂಬಸ್ ಮೆಂಟಿನ ಬಾಲ್ಯದ ಲವ್ಗಾದ
ಗೆಳತಿ
ನಾ
ನಿನಗಾಗಿ
ಕಾಲೇಜಿಗೆ ಚಕ್ಕರ ಹಾಕಿ
ಬಸ್ ಸ್ಟ್ಯಾಂಡ ಸುತ್ತ ಗಿರಕಿ ಹೊಡೆದು

ಓಡೋಗಿ
ಬಸ್ ಹತ್ತಿ
ಸೀಟು ಹಿಡಿದು
ಕಿಟಕಿ ಸಂದ್ಯಾಗ ಮಾರಿ ಹಾಕಿ
ನಾನು ತಡಕ್ತಿದ್ರೆ ಎಲ್ಲಿಂದಲೊ ಬಂದು

ನೀನ್
ಸೀಟ ಕೇಳ್ತಿದ್ದೆ
ಸೀಟನ್ನೆ ದಾರೆಯರೆದು
ನಾನು
ದಾಸನಾಗ ಬಿಡ್ತಿದ್ದೆ

ದೂರ ನಿಂತ ಮುದುಕ
ನನ್ನ
ಸಮಾಜ ಸೇವೆ                
ಅಪ ಹಾಸ್ಯಗೈವುತ್ತಿದ್ದರೆ
ಕರದೊಳಗಿನ ಪುಸ್ತಕ ಮುಖಕ್ಕವತ್ತಕೊಂಡು  ಮುಸುಮುಸು ನಗ್ತಿದ್ದೆ

ಬಸ್ ಡ್ರೈವರಣ್ಣನ
ಬ್ರೆಕಿನ್ ಮೋಜಿಗೆ ಸಿಕ್ಕ ಹಿಂದಿದ್ದ ಹುಡುಗ
ಡಿಕ್ಕಿ ಹೊಡೆದಾಗ
ಛಿಮಾರಿ  ಹಾಕ್ತಿದ್ದೆ

ಊರವು ಸಮೀಪಸಿಲು
ನಾಳೆಯು ಸಿಗುವೆನು ಎನ್ನುತ ಹೇಳಿ
ಮನೆ ಕಡೆ ಹೆಜ್ಜೆಯಿಟ್ಟು ಟಾಟಾ ಹೇಳಿದ್ದಿ ಮನದಲಿ ಕೊರಗಕ ಹಚ್ಚಿದ್ದಿ
ಹ್ರದಯವ ಜಿನಗಕ್ಕ ಹಚ್ದಿದ್ದಿ

ಒಲುಮೆಯ
ಕನವರಿಕೆಯಲಿ
ಬಸ್ಸಿನ ಸೀಟಿಗೆ ಒರಗಿದ್ದೆ,
ಚಿಂತೆಯಲಿ ಊರವ ದಾಟಿದ್ದೆ
ಚೆಕ್ಕರ್  ಕೈಯಲಿ
ಸಿಗಬಿದ್ದು ಬಸ್ಸವ ಇಳಿದಿದ್ದೆ  
ಪ್ರೀತಿಗೆ ಇತಿಶ್ರೀವು  ಹೇಳಿದ್ದೆ!         

                            ಪ್ರೇಯಸ

- "ಪ್ರೇಯಸಿ"

11 Sep 2016, 07:48 am
Download App from Playstore: