*ಸಂತೆ ದಿನ*
*ಭಾನುವಾರ ಸಂತೆ ದಿನ*
ನಮಗೆ ರಜಾವಿಲ್ಲದ ದಿನ..
ವ್ಯಾಪಾರಕ್ಕೆ ಬಿಡುವಿಲ್ಲದ ದಿನ..
ಸ್ವಂತ ಕೆಲಸಗಳಿಗೆ ರಜಾ ದಿನ..
ಹಳ್ಳಿಯಿಂದ ಬರುವರಿಗೆ ಮುಖ್ಯದಿನ...
ವೈದ್ಯ ಭೇಟಿ, ಆಹಾರ ಧಾನ್ಯ,
ತರಕಾರಿ ಕೊಳ್ಳಲು ಮೀಸಲು ದಿನ.
ನೌಕರರಿಗೆ ರಜಾ,
ವ್ಯಾಪಾರಿ ಮಿತ್ರರಿಗೆ ಸಜಾ..
ಔಷಧಿ ವರ್ತಕರಿಗೆ ಬಂದ್ ದಿನವೂ
ಬಾಗಿಲು ಹಾಕಿಸುದಿಲ್ಲಾ..!?
----------------------------------------------
ಕೈತುಂಬಾ ದುಡಿಮೆ,
ತಿರುಗಾಟ ಕಡಿಮೆ,
ಅಧಿಕಾರಿಗಳ ಕಾಟವಿಲ್ಲ,
ಮನೆ ಮಡದಿ ಮಕ್ಕಳಿಗೆ
ಉಪಚಾರದ ಖರ್ಚಿಲ್ಲ..!!
----------------------------------------------
ಆದರೂ ಮನಸ್ಸು ತುಡಿಯುತ್ತಿದೆ
ವಾರಕ್ಕೊಮ್ಮೆಯಾದರೂ ವಿಶ್ರಾಂತಿ ಬೇಕು.. ?
ಆದರೆ ಭಾನುವಾರ ಸಂತೆ.
ಬಾಯಿ ಮುಚ್ಚುಕೊಂಡು ನಿಂತೆ.
ಎಲ್ಲಿಲ್ಲದ ನಮ್ಮ ಚಳ್ಳಕೆರೆ ಸಂತೆ.!
- ವೀರೇಶ್ ಶಿವರುದ್ರಪ್ಪ
11 Sep 2016, 11:51 am
Download App from Playstore: