ಕುಡುಕರ ಹಾಡು
ಏನ್ ಚಂದ ಕಾಣಿಸ್ತಾಳೆ ನಮ್ಮ ಕೋಡೇಸ್ ರಮ್ಮವ್ವ
ನೀನು ನಾನು ಸೇರಿದರೆ ಎಂಥ ಮಜವವ್ವ
ಎಷ್ಟೇ ದೂರದಾಗ ಇದ್ರೂ ನಿನ್ನ ಹುಡಿಕ್ಕೊಂಡು ಬರ್ತಿವಲ್ಲ !
ಅಷ್ಟೆ ಚಂದಾಗಿ ಇರೊ ನಿನ್ನ ಕಾಪಾಡಿಕೊಂಡು ಹೋಗ್ತಿವಲ್ಲ !
ನೀನೆ ಅಂದ ನೀನೆ ಚಂದ ಕೋಡೇಸ್ ರಮ್ಮವ್ವ !
ನಿನ್ನ ಸರಿಸಮ ನಮ್ಮ ಮಂದಿ ಇಲ್ಲವ್ವ !!
ಕಷ್ಟದಾಯಕವಾಗಿರುತ್ತದೆ ಇದ್ರು ಕುಣಿಸ್ತಿಯಾ ಕತ್ತಲಲ್ಲಾದ್ರು ಕಾಣಿಸ್ತೀಯಾ!
ಕೊಚ್ಚೆ ಮೋರಿಲಿ ನೂಕಿ ನನ್ನ ನೋಡ್ದೋರನ್ನೆಲ್ಲ ನಗಿಸ್ತೀಯಾ !
ನೂಕದೆ ಅಂಥ ಕೋಪ ಇಲ್ಲ ಕೋಡೇಸ್ ರಮ್ಮವ್ವ. !
ನಿನ್ನ ನಂಬಿ ಮುಂದೆ ನಡೆವೆ ದಾರಿ ತೋರವ್ವ !!
ನನ್ನ ಹೆಂಡ್ತಿ ಬಂಗಾರ ಸರ ಮುಡುಪಾಗಿಡ್ತಿನಿ ನಿನಗೋಸ್ಕರ!
ಹೊಲ ಗದ್ದೆ ಮನೆಯೆಲ್ಲ ಮಾರೋದ್ರಲ್ಲೆ ನಿನಗೋಸ್ಕರ !
ಯಾರನ್ ಬಿಟ್ರು ಬಿಡತಿನ್ ಕಣೆ ಕೋಡೇಸ್ ರಮ್ಮವ್ವ !
ಸಾಯೋತನಕ ನಿನ್ನ ಬಿಡಕ್ಕಿಲ್ಲ ಸ್ವರ್ಗ ತೋರವ್ವ !!
- babu kaddoni
11 Sep 2016, 02:02 pm
Download App from Playstore: