"ಮಾತು"

ಬಲ್ಲವರು ಹೇಳುವರು
ನನ್ನನು ಜ್ಯೋತಿಯೆಂದು
ನಾ ಉರಿಯದಿದ್ದರೆ
ಜಗವೆಲ್ಲ ಕತ್ತಲಮಯವೆಂದು

'ನಾ' ಯೆಂದು
ಹೇಳಿ ಕೊಳ್ಳಲಾರೆ ನನ್ನಯ ಗೆಲುವನು
ಬಲ್ಲವರು ಬಲ್ಲರು ನನ್ನ ಸೊಲ್ಲರಿಮೆಯನು

ಹರಿದು ನಾ ತೀರಿಸುವೆನು ಸರ್ವ ಜಹ್ವಾಚಾಪಲ್ಯನು
ಬಿದ್ದವರು
ಗೆದ್ದವರು
ಲೆಕ್ಕವಿರಿಸಿಲ್ಲ ನಾ

ಹೇಗೆಂದು ಬಿತ್ತರಿಸಿಲಿ ನನ್ನ ಬತ್ತಳಿಕೆಯ ಬಾಹುಳ್ಯ ಕುಟ್ಟಿಸುವೆ ,
ಸದನದಲಿ ಮೇಜನು ತಟ್ಟಿಸುವೆ
ಸಭೆಯಲಿ ಚಪ್ಪಾಳೆಯನು

ಮುತ್ತಿನ ಮಣಿ ನಾಗನ ಫಣಿ ನಾ
ಕಟ್ಟಬಲ್ಲೆ ! ಸಜ್ಜನ ಪಟ್ಟ
ಕೆಡಹು ಬಲ್ಲೆ!ಹಗೆತನದಟ್ಟ

ಎಲ್ಲಾ ಇಹುದು ನನ್ನೊಳಗೆ ಆಗುವೆ
ನಾ
ಅರಿತವರ ಬಾಳಿನಹೋಳಿಗೆ
ನನ್ನೊಲುಮೆಯ ಭಾಗ್ಯವನರಿಯದ ಆರಿಗೂ ಜಯವಿಲ್ಲ!
"ಪ್ರೇಯಸಿ"

- "ಪ್ರೇಯಸಿ"

11 Sep 2016, 08:16 pm
Download App from Playstore: