ಹಣ್ಣಾಗುತ್ತಿದೆ ಒಡಲು

ಹಣ್ಣಾಗುತ್ತಿದೆ ಒಡಲು
ನಿನ್ನಾ ಮಿಲನದ
ಆಶ್ರಯ ಯಾವಾಗ ಕೊಡುತ್ತಿಯಾ?
ನನ್ನ ಉಸಿರು ನಿಲ್ಲುವ
ಮೊದಲು ಬಂದು
ಈ ಹುಚ್ಚು ಮನದ
ಬಯಕೆ ತೀರಿಸುವೆಯಾ?
ಸಮಾದಿಯ ಮೇಲೆ
ಹೂಗಳನ್ನಿಡುತ್ತಿರುವೆ
ಕಣ್ಣೀರು ಸುರಿಸುತ್ತಿರುವೆ
ಓ ದೇವಾ ಜೀವಾ
ನೀಡು ಒಂದಿಷ್ಟು
ಎದ್ದು ಬರಲಿ ಜೊತೆ
ಕರೆದೊಯ್ಯುವೆ
ನಾ ಪ್ರೇಮದ ಅರಮನೆಗೆ
ಓ ದೇವಾ ನಿನಗೂ ಬೇಸರವಾಯಿತೇ
ನನ್ನ ಈ ಬಯಕೆ....

- ಶಿವಾ ಬಳಿಚಕ್ರ

11 Sep 2016, 10:56 pm
Download App from Playstore: