ಅವಳು ಯಾಕೆ ? ಹೀಗೆ !

ಒಮ್ಮೆ ಮುದ್ದಿಸುತ್ತಾಳೆ.!
ಒಮ್ಮೆ ತಬ್ಬಿಬ್ಬುಗೊಳಿಸುತ್ತಾಳೆ..!
ಒಮ್ಮೊಮ್ಮೆ ತಿದ್ದುತ್ತಾಳೆ..!
ಮಗದೊಮ್ಮೆ
ಮರೆಗುಳಿಯಾಗುತ್ತಾಳೆ..!

ಅವಳು ಯಾಕೆ? ಹೀಗೆ!

ಸಲಿಗೆ ಸಿಕ್ಕೀತೆಂದು
ಹತ್ತಿರ ಹೋದರೆ..
.......ದಬ್ಬುತ್ತಾಳೆ
.......ದೂಡುತ್ತಾಳೆ

ಬರಸೆಳೆಯಲು ಆಡ್ತಾಳೆ ಕುಸ್ತಿ.!
ಮೆಲ್ಲಗೆ ಕಿವಿ ಕಚ್ಚಿ ಕೇಳುತ್ತಾಳೆ..
ತವರಿಗೆ ಯಾವಾಗ ಕಳುಸ್ತಿ..?

‌‌‌‌‌‌

- ವೀರೇಶ್ ಶಿವರುದ್ರಪ್ಪ

12 Sep 2016, 11:32 am
Download App from Playstore: