ಜಲ ದೇವತೆ
ಸಕಲ ಸಂಕುಲಕೆ
ನೀನೇ ಆಧಾರ
ನೀನಿಲ್ಲದೆ ಹೋದರೆ
ಎಲ್ಲವೂ ನಿರಾಧಾರ
ಅರಿತರಿತು ಮರೆತು ಹೋದೆವು,
ಹೋಗುತಿಹೆವು ನಿನ್ನ ಹಿಂಬಲವನು ,ಡಾಂಬರ್ ನೆಚ್ಚಿ .ಮರೆತು ಹೋದೆವು ವಸುದೈವ ಕುಟುಂಬಕ ಮಂತ್ರವನು ಜಪಗೈವುತಿರುವೆವು ನಿನ್ನೊಲುಮೆಯನು ಸಾವಿನಲೂ ಗಹಗಹಿಸಿ ನಕ್ಕು ತೀರಿಸಿ ಕೊಳ್ಳುತಿವೆ ತಮ್ಮ ಮನದಾಳವನು ಹೊತ್ತುರಿಯುತಿವೆ ವಂದೇ ಬಳ್ಳಿಯ ಯೆರಡು ಕುಡಿಗಳು
ದಗದಗಿಸುತಿರುವ ಈಜಗದಲಿ ಜಗಮಗಿಸಿ ನೀ ಬಂದು ಅಪ್ಪಿ ಮುತ್ತಿಟ್ಟು ಸಲಹು ತಾಯಿ
'ಯಂತ್ರ ಮೆಚ್ಚಿ' ತಂತ್ರ ಹೊಲಿಯುವ ಈ ಕಾವೇರಿದ ಮಕ್ಕಳನು.
- "ಪ್ರೇಯಸಿ"
13 Sep 2016, 09:29 pm
Download App from Playstore: