ಮಲ್ಲೆ ಮೊಗ್ಗು

ಮಲ್ಲೆ ಮೊಗ್ಗೊಂದು ಹೇಳಿತಂತೆ
ತಾನು ಬಳ್ಳೀಲಿ ಅರಳಿದರೂ ಚೆನ್ನ!!
ಬಳ್ಳಿ ಮೊಗ್ಗಿಗೆ ಹೇಳಿತಂತೆ
ನೀನು ನನ್ನನ್ನು ಅಗಲದಿರು ಚಿನ್ನ!!

ಮೊಗ್ಗು ಹೂವಾಗಿ ಅರಳುತ್ತಿದ್ದಂತೆ
ಸೂಸಿ ತನ್ನಿಂದ ಸೊಂಪಾದ ಗಂಧ!!
ಗಂಧ ಗಾಳಿಲಿ ಬೆರೆಯುತ್ತಿದ್ದಂತೆ
ಬಂದ ಕೀರ್ತಿಯು ಗಾಳಿಗೆ ಚೆನ್ನ!!

ಹೂವು ಮಕರಂದ ಚಿಮ್ಮುತ್ತಿದ್ದಂತೆ
ದುಂಬಿ ಝೆಂಕರಿಸಿ ಸುತ್ತೋದೆ ಚೆನ್ನ!!
ದುಂಬಿ ಹೂವನ್ನು ಸ್ಪರ್ಷಿಸಿ ತಾನು
ಹೀರಿ ಮಧುವನ್ನು ಸವಿಯೋದೆ ಚೆನ್ನ!!

ಮಧುವು ದುಂಬಿಗೆ ಸೇರುತ್ತಿದ್ದಂತೆ
ಹೂವ ಯವ್ವನವು ಸಾರ್ಥಕವಾದಂತೆ!!
ತಾನು ಬಳ್ಳೀಲಿ ಅರಳಿದರೂನು
ಉದುರಿ ಭೂಮಿಯ ಸೇರಿತಂತೆ!!

- ಪಿ.ಜಿ.ಜ್ಯೋತಿ

14 Sep 2016, 04:23 pm
Download App from Playstore: