ನಲ್ಲೆ...

ನಲ್ಲೆ
ಅವಳಿಲ್ಲದ ಜೀವನವ
ನಾ ಒಲ್ಲೆ..
ಅವಳೇ ನನಗೆ ಎಲ್ಲವೂ..
ಅವಳಿಂದಲೇ
ನನ್ನ ಮನಕ್ಕೆ ಶಾಂತಿಯು..
ನನ್ನ ದುಃಖಕ್ಕೆ ಮರುಗುವಳು
ನನಗಾಗಿ ಬಂದವಳು
ದುಃಖದಿಂದ ಭಾರಗೊಂಡ
ಹೃದಯವನ್ನು ಹಗುರಿಸುವಳು..
ನನಗಾಗಿ ತನ್ನ ನೋವನ್ನೂ
ಮರೆಯುವಳು..
ಪರರ ಸುಖವನ್ನು
ಬಯಸುವವಳು
ತ್ಯಾಗಪೂರ್ಣ ಜೀವನ
ನಡೆಸುವಳು..
ಮಕ್ಕಳ ಹಿತಕ್ಕಾಗಿ
ಹಂಗು ತೊರೆಯುವಳು..
ಮನಸಾರೆ ನನ್ನನ್ನು
ಪ್ರೀತಿಸುವಳು..
ನನ್ನನ್ನೇ ನಂಬಿ
ಬಂದವಳು..
ನನಗಾಗಿ ಸರ್ವವನ್ನೂ
ಅರ್ಪಿಸಿದಳು..
ತಾನು ಹಸಿದು ಕೂತರೂ
ನನ್ನ ಹೊಟ್ಟೆಯ ತುಂಬಿದಳು..
ಜೇಬಿನೆಡೆಗೆ ನೋಡದೆ
ಹೃದಯವನ್ನಾವರಿಸಿದಳು..
ದುಃಖವನ್ನು ತೋರದೆ
ನನ್ನ ಸಂತೈಸಿದಳು..
ಎಂದೂ ಮುಗುಳ್ನಗೆಯ
ಬೀರಿಹಳು
ಅಸಂತೋಷವ ಅಡಗಿಸಿಟ್ಟಳು..
ಸಂಧ್ಯೆ ನನಗಾಗಿ ಕಾಯುವಳು..
ದಾರಿಯೆಡೆಗೆ ನೋಟವ ನೆಟ್ಟಿಹಳು..
ನನ್ನ ಕಂಡೊಡನೆ ನಿಟ್ಟಿಸಿರು ಬಿಟ್ಟು
ನಿರಾಳವಾಗುವಳು..

- ಶಾಹಿದ್ ಉಪ್ಪಿನಂಗಡಿ

14 Sep 2016, 11:11 pm
Download App from Playstore: