ಚಿಟ್ಟೆಯ ಹಿಡಿಯಲು ಹೋಗಿ
ಮನಸ್ಸೆಂಬ ಹೂತೋಟಕೆ
ಹಾರಿ ಬಂತೊಂದು ಚಿಟ್ಟೆ... !!
ಹಿಡಿಯಲೇ.. ಬೇಡವೇ..
ಎಂಬಂತೆ ನಾ ನಿಂತು ಬಿಟ್ಟೆ... !!
ಅದರಂದವ ನೋಡುತ್ತಾ
ನೋಡುತ್ತಾ ನಾ ಪೂರ್ತಿ ಕೆಟ್ಟೆ..!!
ಮನಸಿನ ಕಚಗುಳಿ
ತಡೆಯಲಾಗದೆ
ಪ್ರೇಮ ಪತ್ರವ ಕೊಟ್ಟೆ..!!
ಅಷ್ಟರಲ್ಲಿ ಒಡೆಯಿತು
ಅವಳ ಕೋಪದ ಕಟ್ಟೆ..!!ಹು
ಹಿಡಿದಳವಳು ನನ್ನ ರಟ್ಟೆ..!!
ಹರಿದು ಚಿಂದಿ ಚಿಂದಿಯಾಯ್ತು
ನಾ ತೊಟ್ಟ ಬಟ್ಟೆ..!!
ಚಿಟ್ಟೆಯ ಹಿಡಿಯಲು ಹೋಗಿ
ನಾ ಜಾರಿ ಬಿದ್ದು ಬಿಟ್ಟೆ..!!
- AsiddeeqN
17 Sep 2016, 07:10 am
Download App from Playstore: