ಹನಿಗಳು...
*** ೧ ***
ನೀನು ದೂರಾದ ಮೇಲೆಯೇ
ನನಗೆ ನೀನು ಸಿಕ್ಕಿದೆ,
ಇನ್ನು ಕಳೆದುಕೊಳ್ಳುವ
ಭಯವಿಲ್ಲ
*** ೨ ***
ಮೌನಿಯನು ನೀನು
ಮಾತಾಗಿಸಿದೆ
ಆದರೂ, ಆಡಬೇಕಾದದ್ದು
ಇನ್ನೂ ಉಳಿದಿದೆ
*** ೩ ***
ಅವರ ಕಣ್ಣಲ್ಲಿ ನಾನು
ಲಂಪಟ. ಆದರೆ,
ನನಗೆ ಗೊತ್ತು, ನಾನು-
ನಿನಗೆ ಗೊತ್ತು.
*** ೪ ***
ಜೊತೆಗೆ ನಡೆದ ನದಿಗುಂಟ
ದಾರಿಯಲಿ ಅವನ ಜೊತೆ
ಹೆಜ್ಜೆ ಹಾಕಬೇಡ
ಅಂದು ಮುದುಡಿದ ಹುಲ್ಲು
ಮತ್ತೆ ಚಿಗುರಿದೆಯಂತೆ;
ನನ್ನ ಬಗ್ಗೆ
ಚಾಡಿ ಹೇಳಿಯಾವು
*** ೫ ***
ಕಣ್ಣಹನಿಗೆ ಬಣ್ಣವಿಲ್ಲದ್ದು
ಒಳ್ಳೆಯದಾಯಿತು;
ಕೆನ್ನೆ ಹೋಳಿಯಾಗುವುದು
ತಪ್ಪಿತು.
- ಸುಲ್ತಾನ್ ಮನ್ಸೂರ್
- ಸುಲ್ತಾನ್ ಮನ್ಸೂರ್
18 Sep 2016, 08:45 pm
Download App from Playstore: