ವಾರೆನೋಟ
** ವಾರೆನೋಟ. **
ನಿನ್ನ ಕಣ್ಣಿನ ಒಂದು
ವಾರೆನೋಟವೇ....!!
ಸಾಕು ಗೆಳತಿ...!!
ನನ್ನ ಮನದ ಪ್ರೀತಿಯ
ಕಾರಂಜಿ ಚಿಮ್ಮಿ-ಹೊಮ್ಮಿ..!!
ಹೊರಬರಲು....!!
ನೀನು ಮುಂಗುರುಳ
ಸರಿಸಿ ನೋಡುವ...!!
ಆ...ಕಳ್ಳನೋಟ...!!
ನನ್ನ. ಕೆಣಕಿ-ಕೆಣಕಿ....!
ಕಾಡುತ್ತಿದೆ....!!
ಕನಸಿನೂರಲ್ಲೂ ಬಂದು
ನಿದ್ದೆ..ಕದ್ದಿರುವೆಯಲ್ಲೆ..!!
ಮುತ್ತಿನೂರಲ್ಲಿ ಮಿಂದು
ಮತ್ತೇರಿಸುವೆಯಲ್ಲೆ...!!
ನಿನ್ನ ಮರೆಯಲಾಗದೆ
ನಾ ಪರಿತಪಿಸುತ್ತಿರುವೆ...!!
ಬಂದುಬಿಡು ಗೆಳತಿ..!!
ನನ್ನ ಪ್ರೀತಿಯ ಪಲ್ಲಕ್ಕಿಗೆ..!!
ಮೆರೆಸಿ ಮೋಹಿಸುವೆ..!!
ಜೇನು ಕಡಲಲ್ಲಿ....!!!
✍ ಚಂದು ✍
.
- vageesh
18 Sep 2016, 11:23 pm
Download App from Playstore: