ನೆನಪು
ಪ್ರತಿ ಮುಂಜಾನೆಯ
ಹೂ ನಗುವಿನ
ನನ್ನಯ ಕಿರು ನಗೆಯಲ್ಲಿ
ನಿನ್ನದೆ ನೆನಪು
ಪ್ರತಿ ಗೋಧೂಳಿಯ
ತಂಗಾಳಿಯ ಹಿತದಲ್ಲಿ
ನನ್ನಯ ಮುಗುಳು ನಗುವಲ್ಲಿ
ನಿನ್ನದೆ ನೆನಪು
ಪ್ರತಿ ರಾತ್ರಿ ಚಂದ್ರೋದಯದ
ನಕ್ಷತ್ರಗಳ ನಗುವಲಿ
ನನ್ನಯ ನಿರಾಸೆಯ. ನಗುವಲ್ಲಿ
ನಿನ್ನದೆ ನೆನಪು
- vageesh
19 Sep 2016, 08:37 am
Download App from Playstore: