ಕೆಂದಾವರೆ

ಓ ತಾವರೆ ಕೆಂದಾವರೆ
ನಿನ್ನಾಸರೆ ಈ ಕೆರೆ!!
ಎಕಾಂತದ ಈ ಕಾಂತಿಗೆ
ಸಂಗಾತಿಯು ರವಿ ಕಾಂತಿಯು!!

ಕೆಸರೆಲ್ಲವು ಹಸಿರಾಗಿದೆ
ಹಸಿರೊಂದಿಗೆ ಸುಮ ಅರಳಿದೆ!!
ರಂಗೇರಿದೆ ಹೊಸದಾಗಿದೆ
ರವಿ ಕಾಂತಿಗೆ ಸುಮ ನಾಚಿದೆ!!

ಕೆಂದಾವರೆ ಕೈ ಚಾಚಿದೆ
ನವ ಪ್ರೀತಿಗೆ ಮೈ ಮರೆಯುತ!!
ರವಿ ಬಾರದೆ ಸುಮ ಬಾಡಿದೆ
ತನ್ನ ಪ್ರೇಮಿಯ ಬಳಿ ಸೇರದೆ!!

ತನ್ನ ಪ್ರೇಮಿಯ ತಾ ಸೇರಲು
ಕೆಂದಾವರೆ ಮರು ಜನಿಸಿದೆ!!
ಒಂದಾಗುವ ದಿನ ಬಾರದೆ
ಈ ಪ್ರೀತಿಗೆ ಕೊನೆ ಎಲ್ಲಿದೆ!!

- ಪಿ.ಜಿ.ಜ್ಯೋತಿ

20 Sep 2016, 12:38 pm
Download App from Playstore: