ಚಂದಿರನು ಮೂಡಿ ಬಂದ
ತಾರೆಗಳ ನಡುವಿನಿಂದ
ಚಂದಿರನು ಮೂಡಿ ಬಂದ!!
ತಂಗಾಳಿ ಜೊತೆಯಲ್ಲಿ
ತಿಂಗಳ ಬೆಳಕ ತಂದ!!
ತಿಂಗಳ ಬೆಳಕಲ್ಲಿ
ಹೊಂಗನಸ ಹೊತ್ತು ತಂದ!!
ಮಲಗಮ್ಮ ನನ್ನ ಕಂದ
ಚಂದಿರನು ಮೂಡಿ ಬಂದ!!
ಮೋಡದ ಹೊದಿಕೆ ಹೊದ್ದು
ನಿದ್ರಿಸುವ ಬಾನಿನಲ್ಲಿ!!
ಹೊದಿಕೆಯ ತಾನೇ ಸರಿಸಿ
ನಗುವನು ನಿನ್ನ ಕಂಡು!!
ನನ್ನೆದೆಯ ತೊಟ್ಟಿಲಲ್ಲಿ
ಜೋಗುಳವು ನಿನಗಾಗಿ!!
ಮಲಗಿಸುವೆ ಮುದ್ದು ಮಾಡಿ
ನಿದ್ರಿಸು ದಯಮಾಡಿ!!
- ಪಿ.ಜಿ.ಜ್ಯೋತಿ
20 Sep 2016, 01:19 pm
Download App from Playstore: