ನಡೆವ ದಾರಿ
ನಾ ನಡೆವ ದಾರಿಯಲ್ಲಿ
ಒಬ್ಬಂಟಿ ನಾನು ಇಲ್ಲಿ!!
ಬರಬಾರದೇಕೆ ನೀನು
ಒಮ್ಮೆ ನನ್ನ ಎದುರಿನಲ್ಲಿ!!
ಬಿಗಿದಪ್ಪಿಕೊಂಡು ಬಿಡುವೆ
ನಿನ್ನೊಳಗೆ ಸೇರಿಕೊಳ್ಳುವೆ!!
ನಿನ್ನಿಂದ ದೂರವಾಗೋ
ಕ್ಷಣ ಬಾರದಿರಲಿ ಎನ್ನುವೆ!!
ಈ ಬಾಳ ಪಯಣದಲ್ಲಿ
ಸಾಗುವೆನು ದಿನವು ಇಲ್ಲಿ!!
ಬರಬಾರದೇಕೆ ನೀನು
ಒಮ್ಮೆ ನನ್ನ ಎದುರಿನಲ್ಲಿ!!
ಕಣ್ಣ ಅಂಚಿನಲ್ಲಿ
ಒದ್ದೆಯಾದ ಭಾವ!!
ನೀನು ಬಾರದೇನೆ
ತಂದೆ ಮನಕೆ ನೋವ!!
ನಾ ಸಾಗೋ ಹಾದಿಯಲ್ಲಿ
ನನ್ನ ಕಣ್ಣ ಹುಡುಕಾಟವಿಲ್ಲಿ!!
ಬರಬಾರದೇಕೆ ನೀನು
ಒಮ್ಮೆ ನನ್ನ ಎದುರಿನಲ್ಲಿ!!
ಮತ್ತೆ ಮತ್ತೆ ಯಾಕೆ
ಬರುವಿಯೆಂಬ ಭಾವ!!
ಆಸೆ ನಿರಾಸೆಯಾಗಿ
ಕಳೆಯುವುದು ತಿರುವಿನಲ್ಲಿ!!
- ಪಿ.ಜಿ.ಜ್ಯೋತಿ
20 Sep 2016, 04:22 pm
Download App from Playstore: